ಮಂಗಳೂರು: ಯುವ ದಂಪತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮರೋಳಿ ಬಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ನಡೆದಿದೆ.
ಕೊಪ್ಪದ ಮೂಲದ ಮಲ್ಲಿಕಾರ್ಜುನ್ ಬಸವರಾಜ್ ಮತ್ತು ಸೌಮ್ಯಾ ನಾಯಕ್ ಮೃತ ಯುವ ದಂಪತಿ ಎಂದು ಗುರುತಿಸಲಾಗಿದೆ.
ಮಲ್ಲಿಕಾರ್ಜುನ್ ಹಾಗೂ ಸೌಮ್ಯಾ ನಾಯಕ್ ಒಂದೂವರೆ ವರ್ಷದ ಹಿಂದೆ ವಿವಾಹ ಆಗಿದ್ದರು ಎನ್ನಲಾಗಿದೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.