ಸುಬ್ರಹ್ಮಣ್ಯ: ಮಂಗಳೂರು- ಬೆಂಗಳೂರು ರೈಲು ಮಾರ್ಗದ ಎಡಕುಮೇರಿ -ಕಡಗರವಳ್ಳಿ ನಡುವಣ ದೋಣಿಗಲ್‌ನಲ್ಲಿ ಭೂಕುಸಿತ ನಡೆದಲ್ಲಿ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಸುಮಾರು 12 ದಿನಗಳ ಬಳಿಕ ಗುರುವಾರದಿಂದ ರೈಲು ಸಂಚಾರ ಪುನರಾರಂಭಗೊಂಡಿದೆ.
ಜು. 26ರಂದು ರಾತ್ರಿ ಹಾಸನ ಜಿಲ್ಲೆಯ ಎಡಕುಮೇರಿ -ಕಡಗರವಳ್ಳಿ ನಡುವಣ ದೋಣಿಗಲ್ ಎಂಬಲ್ಲಿ ರೈಲು ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿತ್ತು.
ದುರಸ್ತಿ ಕಾರ್ಯ ಸಂಪೂರ್ಣವಾಗಿದ್ದು, ಆ.8 ಅಂದರೆ ಇಂದಿನಿಂದ ಪ್ಯಾಸೆಂಜರ್ ರೈಲುಗಳಿಗೆ ಅವಕಾಶ ಕಲ್ಪಿಸಿದ್ದು, ಮೊದಲು ಪ್ಯಾಸೆಂಜರ್ ರೈಲು ನಿನ್ನೆ ಮೊದಲ ಪ್ಯಾಸೆಂಜರ್ ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜೂ. ಗೋಮಟೇಶ್ವರ ಎಕ್ಸ್‌ಪ್ರೆಸ್ ಅನ್ನು 12:37 ಗಂಟೆಗೆ ಯಶಸ್ವಿಯಾಗಿ ರವಾನಿಸಲಾಯಿತು.
ಮಂಗಳವಾರದಿಂದ ಎರಡು ದಿನಗಳ ಕಾಲ ಸರಕುಗಳನ್ನೊಳಗೊಂಡ ಗೂಡ್ಸ್ ರೈಲು ಸಂಚಾರ ಯಶಸ್ವಿಯಾದ ಬಳಿಕ ನಿನ್ನೆಯಿಂದ ಪ್ರಯಾಣಿಕ ರೈಲುಗಳಿಗೆ ಅವಕಾಶ ಮಾಡಿಕೊಡಲಾಗಿದೆ.