Home ಟಾಪ್ ಸುದ್ದಿಗಳು ಮಂಗಳೂರು: ಜ್ಯೋತಿ ಸರ್ಕಲ್’ನಲ್ಲಿ ಅಂಬೇಡ್ಕರ್ ವೃತ್ತ ನಿರ್ಮಿಸುವಂತೆ ಹಕ್ಕೊತ್ತಾಯ

ಮಂಗಳೂರು: ಜ್ಯೋತಿ ಸರ್ಕಲ್’ನಲ್ಲಿ ಅಂಬೇಡ್ಕರ್ ವೃತ್ತ ನಿರ್ಮಿಸುವಂತೆ ಹಕ್ಕೊತ್ತಾಯ

ಮಂಗಳೂರು: ನಗರದ ಹೃದಯ ಭಾಗ(ಹಳೆ ಜ್ಯೋತಿ ಸರ್ಕಲ್) ನಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ವೃತ್ತ ನಿರ್ಮಿಸುವ ಕುರಿತಂತೆ ಮಂಗಳೂರು ತಾಲೂಕು ಪಂಚಾಯತ್ ವ್ಯಾಪ್ತಿಯ ದಲಿತರ ಕುಂದುಕೊರತೆ ಸಭೆಯಲ್ಲಿ ದಲಿತರಿಂದ ಹಕ್ಕೊತ್ತಾಯ ವ್ಯಕ್ತವಾಗಿದೆ.


ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗುರುವಾರ ತಹಶೀಲ್ದಾರ್ ಪ್ರಶಾಂತ್ ವಿ. ಪಾಟೇಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಲಿತ ನಾಯಕರು, ಅಂಬೇಡ್ಕರ್ ವೃತ್ತಕ್ಕಾಗಿ 40 ಲಕ್ಷ ರೂ. ಮಂಜೂರು ಆಗಿದೆ ಎಂದು ಕಳೆದ ಹಲವು ಸಮಯದಿಂದ ಹೇಳಲಾಗುತ್ತಿದೆ. ಆದರೆ ಕೆಲಸ ಆರಂಭವಾಗಿಲ್ಲ. ಕಳೆದ ಒಂದೆರಡು ವರ್ಷದ ಅವಧಿಯಲ್ಲಿ ನಗರದಲ್ಲಿ ಹಲವು ವೃತ್ತಗಳು ನಿರ್ಮಾಣವಾಗಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Join Whatsapp
Exit mobile version