Home ಟಾಪ್ ಸುದ್ದಿಗಳು ಮಂಗಳೂರು: ಚಲಿಸುತ್ತಿದ್ದ ಕಾರಿನ ಬಾನೆಟ್ ನಲ್ಲಿ ಹೆಬ್ಬಾವು ಪತ್ತೆ

ಮಂಗಳೂರು: ಚಲಿಸುತ್ತಿದ್ದ ಕಾರಿನ ಬಾನೆಟ್ ನಲ್ಲಿ ಹೆಬ್ಬಾವು ಪತ್ತೆ

ಮಂಗಳೂರು: ಚಲಿಸುತ್ತಿದ್ದ ಕಾರಿನ ಬಾನೆಟ್ ನಲ್ಲಿ ಹೆಬ್ಬಾವೊಂದು ಪತ್ತೆಯಾದ ಘಟನೆ ನಗರದ ಮಣ್ಣಗುಡ್ಡೆ ಬಳಿ ನಡೆದಿದೆ.


ಕುದ್ರೋಳಿಯಿಂದ ವ್ಯಕ್ತಿಯೊಬ್ಬರು ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಮಣ್ಣಗುಡ್ಡೆ ಬಳಿ ಇಂಜಿನ್ ಬಂದ್ ಆಗಿದೆ. ಹಾಗಾಗಿ ಕಾರಿನ ಮಾಲಕರು ಮೆಕ್ಯಾನಿಕ್ ನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.

ಆತ ಕಾರಿನ ಬಾನೆಟ್ ತೆರೆದು ನೋಡಿದಾಗ ಅದರೊಳಗೆ ಹೆಬ್ಬಾವು ಕುಳಿತಿರುವುದು ಕಂಡು ಬಂದಿದೆ. ಬಳಿಕ ಹೆಬ್ಬಾವನ್ನು ಹೊರ ತೆಗೆಯಲಾಯಿತು ಎಂದು ತಿಳಿದು ಬಂದಿದೆ.

Join Whatsapp
Exit mobile version