Home ಕರಾವಳಿ ಮಂಗಳೂರು: ರಸ್ತೆ ಬದಿ ಕಸ ಎಸೆದ ವ್ಯಕ್ತಿಗೆ 20 ಸಾವಿರ ರೂ. ದಂಡ

ಮಂಗಳೂರು: ರಸ್ತೆ ಬದಿ ಕಸ ಎಸೆದ ವ್ಯಕ್ತಿಗೆ 20 ಸಾವಿರ ರೂ. ದಂಡ

ಮಂಗಳೂರು: ರಸ್ತೆ ಬದಿ ಕಸ ಎಸೆಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಗಳೂರು ಮಹಾನಗರ ಪಾಲಿಕೆಯು 20 ಸಾವಿರ ರೂ. ದಂಡ ವಿಧಿಸಿದೆ. ನಗರದ ಕಂಕನಾಡಿ ಮಾರುಕಟ್ಟೆ ರಸ್ತೆ ಬದಿಗೆ ಕಸ ಎಸೆಯುತ್ತಿದ್ದ ಫಾಸ್ಟ್ ಫುಡ್ ನೌಕರನಿಗೆ ಪಾಲಿಕೆಯು ದಂಡ ವಿಧಿಸಿದೆ.

ಈ ಜಾಗದಲ್ಲಿ ಕಸ ಎಸೆದ ಪರಿಣಾಮ ಬ್ಲ್ಯಾಕ್ ಸ್ಪಾಟ್ ನಿರ್ಮಾಣಗೊಂಡಿತ್ತು. ಮಂಗಳೂರು ಮಹಾನಗರ ಪಾಲಿಕೆಯು ಬಳಿಕ ಆ ಪ್ರದೇಶವನ್ನು ಸುಂದರಗೊಳಿಸಿತ್ತು. ಅದರ ನಂತರ ಕಸ ಎಸೆಯುವುದು ನಿಯಂತ್ರಣಕ್ಕೆ ಬಂದಿದ್ದರೂ ಇತ್ತೀಚೆಗೆ ಕೆಲವರು ಕಸ ಎಸೆಯುತ್ತಿದ್ದರು. ಇದನ್ನು ಗಮನಿಸಿದ ಮನಪಾ ಅಧಿಕಾರಿಗಳು ದಾಳಿ ನಡೆಸಿ ಕಸ ಎಸೆಯುತ್ತಿದ್ದ ಫಾಸ್ಟ್ ಫುಡ್ ನೌಕರನಿಗೆ 20 ಸಾವಿರ ರೂ. ದಂಡ ವಿಧಿಸಿದ್ದಾರೆ.

Join Whatsapp
Exit mobile version