Home ಕರಾವಳಿ ಮಂಗಳೂರು: ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಕಾರು ಡಿಕ್ಕಿ, 7 ಮಂದಿಗೆ ಗಾಯ

ಮಂಗಳೂರು: ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಕಾರು ಡಿಕ್ಕಿ, 7 ಮಂದಿಗೆ ಗಾಯ

ಮಂಗಳೂರು: ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಕಾರೊಂದು ಡಿಕ್ಕಿ ಹೊಡೆದು ವಿದ್ಯುತ್ ಕಂಬಕ್ಕೆ ಬಡಿದ ಘಟನೆ ಭಾನುವಾರ ಮಧ್ಯಾಹ್ನ ಬೆಂಗರೆಯಲ್ಲಿ ನಡೆದಿದೆ.

ಘಟನೆಯಲ್ಲಿ ಏಳು ಮಕ್ಕಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡ ಮಕ್ಕಳನ್ನು ನಾಶಿಕ್ ,ಶಬೀಬ್, ಶಮ್ಮಾಝ್ ,ಮುಶೈಫ್ ,ಅರಾಫತ್ ,ಶಾಬಿಕ್, ನಹೀಂ ಎಂದು ಗುರುತಿಸಲಾಗಿದೆ.

ಬೆಂಗರೆ ಸೂಪರ್ ಸ್ಟಾರ್ ಆಟದ ಮೈದಾನದಲ್ಲಿ ಭಾನುವಾರ ಮಕ್ಕಳು ಆಟವಾಡುತ್ತಿದ್ದ ವೇಳೆ ಮುಖ್ಯ ರಸ್ತೆಯಲ್ಲಿ ಬಂದ ಕಾರು  ಚಾಲಕನ ನಿಯಂತ್ರಣ ತಪ್ಪಿ ಮಕ್ಕಳಿಗೆ ಡಿಕ್ಕಿ ಹೊಡೆದ ಬಳಿಕ ಸಮೀಪದಲ್ಲಿದ್ದ ವಿದ್ಯುತ್ ಕಂಬಕ್ಕೆ ಬಡಿದು ನಿಂತಿದೆ.

ಸ್ಥಳೀಯರು ಕೂಡಲೇ ಮಕ್ಕಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸಣ್ಣ ಪುಟ್ಟ ಗಾಯಗಳಾಗಿದ್ದ ಇಬ್ಬರು ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಉಳಿದ ಐವರು ಮಕ್ಕಳನ್ನು ಒಳ ರೋಗಿಗಳಾಗಿ  ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಗೊಂಡ ಮಕ್ಕಳು 6ರಿಂದ 15 ವರ್ಷದೊಳಗಿನವರಾಗಿದ್ದಾರೆ.ಮಕ್ಕಳ ಕೈ ಕಣ್ಣು ಕಾಲುಗಳಿಗೆ ಗಾಯಗಳಾಗಿವೆ.

Join Whatsapp
Exit mobile version