Home ಕರಾವಳಿ ಮಂಗಳೂರು: ಈಜಲು ಹೋದ ಯುವಕ ನೀರುಪಾಲು

ಮಂಗಳೂರು: ಈಜಲು ಹೋದ ಯುವಕ ನೀರುಪಾಲು

ಮಂಗಳೂರು: ಸ್ನೇಹಿತರೊಂದಿಗೆ ಕಲ್ಲಿನ ಕೋರೆಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ಮೃತಪಟ್ಟ ಘಟನೆ ಉಳಾಯಿಬೆಟ್ಟು ಬದ್ರಿಯ ನಗರದಲ್ಲಿ ಭಾನುವಾರ ಸಂಜೆ ನಡೆದಿದೆ.


ಜೋಕಟ್ಟೆ ನಿವಾಸಿ ಆದಂ ಎಂಬವರ ಪುತ್ರ ಮುಹಮ್ಮದ್ ಶಿಯಾಝ್ (19) ಮೃತಪಟ್ಟ ಯುವಕ.


ಭಾನುವಾರ ಬೆಳಿಗ್ಗೆ ಶಿಯಾಝ್ ಉಳಾಯಿಬೆಟ್ಟು ನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದು ಇಂದು ಸಂಜೆ ಸ್ನೇಹಿತರೊಂದಿಗೆ ಬದ್ರಿಯಾ ನಗರದ ಪೆರ್ಮುಂಕಿ ಕಾಯರಪದವುನಲ್ಲಿರುವ ಕಲ್ಲಿನ ಕೋರೆಯಲ್ಲಿ ಈಜಲು ತೆರಳಿದ್ದಾರೆ. ಕೋರೆಯ ಆಳ ತಿಳಿಯದೆ ಈಜಲು ಇಳಿದಿದ್ದು, ಈ ವೇಳೆ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.


ತಕ್ಷಣ ಸ್ಥಳೀಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಅವರನ್ನು ಉಳಿಸಲು ಸಾಧ್ಯವಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಎಂಆರ್ ಪಿಎಲ್ ನಲ್ಲಿ ಕೆಲಸ ಮಾಡುತ್ತಿದ್ದ ಶಿಯಾಝ್ ಅವರು ತಂದೆ, ತಾಯಿ, ಓರ್ವ ಸಹೋದರಿ, ಸಹೋದರನನ್ನು ಅಗಲಿದ್ದಾರೆ.
ಜೋಕಟ್ಟೆ ಮಸೀದಿಯ ಖಬರಸ್ಥಾನದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Join Whatsapp
Exit mobile version