ಮಂಗಳೂರು | ಮಹಿಳೆ ಕೊಲೆ ಪ್ರಕರಣ: ಪೂರ್ವ ದ್ವೇಷವೇ ಕೊಲೆಗೆ ಕಾರಣವಾಯಿತೇ ?

Prasthutha|

ಮಂಗಳೂರು: ಶಕುಂತಳಾ ಕೊಲೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಶ್ರೀಧರ ಮುಗೇರ ನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ಪೂರ್ವ ದ್ವೇಷವೇ ಕಾರಣ ಎಂದು ಹೇಳಲಾಗುತ್ತಿದೆ.

- Advertisement -

ಶಕುಂತಳಾ ಅವರು ಪುತ್ತೂರಿನಲ್ಲಿ ಕ್ಯಾಂಟೀನ್‌ ನಡೆಸುತ್ತಿದ್ದರು. ಕ್ಯಾಂಟೀನ್‌ ಬಾಗಿಲು ಹಾಕಿ ಮಧ್ಯಾಹ್ನ ಪುತ್ತೂರು ಕಡೆಯಿಂದ ಮಾಣಿ ಕಡೆಗೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಆಟೋ ರಿಕ್ಷಾದಲ್ಲಿ ಬಂದ ಶ್ರೀಧರ ನೇರಳಕಟ್ಟೆ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಮಾತನಾಡಿಸಿದ್ದಾನೆ.
ಬಳಿಕ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ.
ಈ ಕೊಲೆಗೆ ಒಂದು ವರ್ಷಕ್ಕೂ ಮುಂಚೆ ಶ್ರೀಧರನ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದ ಶಕುಂತಳಾ ಒಂದು ವರ್ಷದಿಂದ ತನ್ನ ಸ್ಕೂಟರ್‌ ನಲ್ಲಿ ಪುತ್ತೂರಿಗೆ ಹೋಗಿ ಬರುತ್ತಿರುವುದು ಕಾರಣವಾಯಿತೇ ಅಥವಾ 1 ವರ್ಷದ ಹಿಂದೆ ಶ್ರೀಧರನು ಮನೆಗೆ ಬಂದು ಶಕುಂತಳಾಗೆ ಅವಾಚ್ಯ ಶಬ್ದಗಳಿಂದ ಬೈದು ಘಟನೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು ಕೂಡ ಕಾರಣವಾಯಿತೇ ಅಥವಾ ಇನ್ನಿತರ ಕಾರಣಗಳಿವೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇವರಿಬ್ಬರ ನಡುವಿನ ಸಂಬಂಧದ ಕುರಿತು ತನಿಖೆ ನಡೆಸಲಾಗುತ್ತಿದೆ. ಬಳಿಕ ಪೂರ್ಣ ಚಿತ್ರಣ ಸಿಗಬಹುದು ಎಂದು ಪೊಲೀಸರು ಹೇಳಿದ್ದಾರೆ.



Join Whatsapp