Home ಕರಾವಳಿ ಮಂಗಳೂರು ವೀಕೆಂಡ್ ಲಾಕ್ ಡೌನ್ | ನಾಗರಿಕರಿಂದ ಉತ್ತಮ ಸ್ಪಂದನೆ : ಕಮಿಷನರ್ ಮಾಹಿತಿ

ಮಂಗಳೂರು ವೀಕೆಂಡ್ ಲಾಕ್ ಡೌನ್ | ನಾಗರಿಕರಿಂದ ಉತ್ತಮ ಸ್ಪಂದನೆ : ಕಮಿಷನರ್ ಮಾಹಿತಿ

ಮಂಗಳೂರು : ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಎರಡು ದಿನಗಳ ವೀಕೆಂಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.  ಬೆಳಗ್ಗೆ 6 ರಿಂದ 10 ರ ವರೆಗೆ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ನೀಡಲಾಗಿತ್ತು. ಸಾರ್ವಜನಿಕರು 9 ಗಂಟೆಗೆ ಅಗತ್ಯ ವಸ್ತು ಖರೀದಿಸಿ ಮನೆ ಸೇರಿದ್ದಾರೆ. ಬಂದೋಬಸ್ತ್ ಹಿನ್ನೆಲೆಯಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ 54 ಚೆಕ್ ಪೋಸ್ಟ್ ನಿಯೋಜನೆ ಮಾಡಲಾಗಿದೆ.800 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಚೆಕ್ ಪೋಸ್ಟ್ ಮತ್ತು ಗಸ್ತಿನಲ್ಲಿ ಇದ್ದಾರೆ.

35 ಮೊಬೈಲ್ ಸ್ಕ್ವಾಡ್, ಕೋವಿಡ್ ಮಾರ್ಷಲ್ ತಂಡ ನಿಯೋಜನೆ ಮಾಡಲಾಗಿದೆ. ಅಗತ್ಯ ಸೇವೆಗಾಗಿ ಸರ್ಕಾರಿ ಬಸ್ ಓಡಾಟಕ್ಕೆ ಅನುಮತಿ ನೀಡಲಾಗಿದೆ. 30 ಮಂದಿಗೆ ಬಸ್ ನಲ್ಲಿ ಅಗತ್ಯ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದುವರೆಗೆ ಎಫಿಡಮಿಕ್ ಕಾಯ್ದೆ ಅಡಿ ಒಟ್ಟು 80 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ನೈಟ್ ಕರ್ಫ್ಯೂವನ್ನು ಉಲ್ಲಂಘಿಸಿದ್ದಕ್ಕಾಗಿ ನಿನ್ನೆ ರಾತ್ರಿ 30 ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಮಾಹಿತಿ ನೀಡಿದ್ದಾರೆ.

Join Whatsapp
Exit mobile version