ಮಂಗಳೂರು: ವಾಹನ ಸಂಚಾರಕ್ಕೆ ತೊಡಕು| ಬೀದಿ ಬದಿ ವ್ಯಾಪಾರ ಸ್ಥಳಾಂತರಕ್ಕೆ ಎಸಿಪಿ ಸೂಚನೆ

Prasthutha|

ಮಂಗಳೂರು: ಕೊರೋನಾ ಸೊಂಕು ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಡಿಲಿಕೆಯಿಂದ ನಗರದಲ್ಲಿ ವಾಹನ ಸಂಚಾರ ಹೆಚ್ಚಳದಿಂದಾಗಿ ಬೀದಿ ಬದಿಗಳಲ್ಲಿ ವ್ಯಾಪಾರಸ್ಥರು ಡೇರೆ ನಿರ್ಮಿಸಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯುಂಟಾಗುತ್ತಿದ್ದು, ಬೀದಿ ಬದಿಯಿಂದ ವ್ಯಾಪಾರಸ್ಥರು ವಿಶಾಲ ಪ್ರದೇಶಗಳಿಗೆ ಹೋಗಿ ವ್ಯಾಪಾರ ನಡೆಸುವಂತೆ ಎಸಿಪಿ ಎಂ ಎ ನಟರಾಜ್ ಸೂಚಿಸಿದ್ದಾರೆ.

- Advertisement -

ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬೀದಿ ಬದಿಯಲ್ಲಿ ವ್ಯಾಪಾರಸ್ಥರು ಡೇರೆ ನಿರ್ಮಿಸಿದ್ದು, ವಾಹನ ಸಂಚಾರಗಲಿಗೆ ತೊಂದರೆಯುಂಟಾಗಿದೆ ಈ ಹಿನ್ನೆಲೆಯಲ್ಲಿ ಸೋಮವಾರದಿಂದ ರಸ್ತೆ ಬದಿಗಳಲ್ಲಿ ವ್ಯಾಪಾರ ನಡೆಸದಂತೆ ಇಂದು ನಗರದ ರಸ್ತೆ ಬದಿ ವ್ಯಾಪಾರಸ್ಥರು ಮತ್ತು ಆಟೋ ಚಾಲಕರನ್ನು ಭೇಟಿಯಾಗಿ ಎಸಿಪಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.



Join Whatsapp