ಮಂಗಳೂರು ವಿವಿಯ ತರಗತಿಯಲ್ಲಿ ಸಾವರ್ಕರ್ ಫೋಟೊ ಅಳವಡಿಸಿ ವಿಕೃತಿ ಮೆರೆದ ವಿದ್ಯಾರ್ಥಿಗಳು

Prasthutha|

ಮಂಗಳೂರು: ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡದ ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜು ಇದೀಗ ಹೊಸ ವಿವಾದಕ್ಕೆ ಸಿಲುಕಿದೆ. ವಿವಿ ಕಾಲೇಜು ತರಗತಿಯೊಂದಕ್ಕೆ ವಿವಾದಿತ ವ್ಯಕ್ತಿ ಸಾವರ್ಕರ್ ಫೋಟೊ ಅಳವಡಿಸಿ ಎಬಿವಿಪಿ ವಿದ್ಯಾರ್ಥಿಗಳು ವಿಕೃತಿ ಮೆರೆದಿದ್ದಾರೆ.

- Advertisement -


ಕಾಲೇಜಿನ ತರಗತಿಯ ಬ್ಲಾಕ್ ಬೋರ್ಡಿನ ಮೇಲ್ಭಾಗದಲ್ಲಿ ವಿದ್ಯಾರ್ಥಿಗಳು ಸಾವರ್ಕರ್ ಭಾವಚಿತ್ರವನ್ನು ಅಳವಡಿಸಿದ್ದಾರೆ. ವಿದ್ಯಾರ್ಥಿಗಳು ಪೋಟೋವನ್ನು ಅಳವಡಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಾದ ಕೆಲವೇ ಸಮಯದಲ್ಲಿ ವಿವಿ ಪ್ರಾಂಶುಪಾಲೆ ಸಾವರ್ಕರ್ ಫೋಟೋವನ್ನು ತೆರವುಗೊಳಿಸಿದ್ದಾರೆ.


ಕಳೆದ ಕೆಲವು ದಿನಗಳ ಹಿಂದೆ ಮಂಗಳೂರು ವಿವಿ ಕಾಲೇಜು ಆಡಳಿತ ಮಂಡಳಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನಿರಾಕರಿಸಿತ್ತು. ಏಕಾ ಏಕಿ ನೋಟ್ ಬ್ಯಾನ್ ರೀತಿಯಲ್ಲೇ ಒಂದೇ ರಾತ್ರಿ ಹಿಜಾಬ್ ಅನ್ನು ನಿಷೇಧಿಸಲಾಗಿತ್ತು ಎನ್ನುವ ಆರೋಪಗಳು ಕಾಲೇಜಿನ ವಿರುದ್ಧ ಕೇಳಿ ಬಂದಿತ್ತು.

- Advertisement -

ಈ ಬಗ್ಗೆ ಪ್ರತಿಕ್ರಿಯೆಗಾಗಿ “ಪ್ರಸ್ತುತ” ಪ್ರಾಂಶುಪಾಲರನ್ನು ಸಂಪರ್ಕಿಸಿದಾಗ, ಮಾಹಿತಿಗೆ ಪೊಲೀಸ್ ಠಾಣೆಗೆ ಕರೆ ಮಾಡಿ ಎಂದು ಬೇಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸಿದ್ದಾರೆ.



Join Whatsapp