ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಪುಂಡರು ಎಬ್ಬಿಸಿದ ಕೋಲಾಹಲದಿಂದಾಗಿ ಮುಸ್ಲಿಂ ವಿದ್ಯಾರ್ಥಿನಿಯರ ಶಿರವಸ್ತ ವಿವಾದವಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದ ಐವರು ವಿದಾರ್ಥಿನಿಯರ ಪೈಕಿ ಒಬ್ಬರು ಟಿಸಿ ಪಡೆದು ಕಾಲೇಜಿನಿಂದ ವರ್ಗಾವಣೆಗೊಂಡಿದ್ದಾರೆ.
ಐವರು ವಿದ್ಯಾರ್ಥಿನಿಯರೂ ವರ್ಗಾವಣೆ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು . ಉಳಿದ ನಾಲ್ಕು ವಿದ್ಯಾರ್ಥಿನಿಯರ ಅರ್ಜಿಯನ್ನು ತಿರಸ್ಕರಿಸಿ ಮರು ಅರ್ಜಿ ಸಲ್ಲಿ¸ಸುವಂತೆ ಆಡಳಿತ ಮಂಡಳಿ ನಿರ್ದೇಶಿಸಿದೆ. ಟಿಸಿ ಪಡೆದ ವಿದ್ಯಾರ್ಥಿನಿಯು ಯಾವ ಕಾಲೇಜಿಗೆ ವರ್ಗಾವಣೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಶಾಂತವಾಗಿದ್ದ ಮಂಗಳೂರು ವಿವಿಯಲ್ಲಿ ಎಬಿವಿಪಿ ಪುಂಡರು ಎಬ್ಬಿಸಿದ ದೊಂಬಿಯಿಂದಾಗಿ ವಿದ್ಯಾರ್ಥಿನಿಯರು ಶೈಕ್ಷಣಿಕ ವರ್ಷದ ಮಧ್ಯೆಯೇ ಪರದಾಡುವಂತಾಗಿದೆ.