Home ಟಾಪ್ ಸುದ್ದಿಗಳು ಮಂಗಳೂರು | ಅನ್ಯಕೋಮಿನ ವ್ಯಕ್ತಿಯ ಮೇಲೆ ತಲವಾರು ದಾಳಿ: ಮೂವರ ಬಂಧನ

ಮಂಗಳೂರು | ಅನ್ಯಕೋಮಿನ ವ್ಯಕ್ತಿಯ ಮೇಲೆ ತಲವಾರು ದಾಳಿ: ಮೂವರ ಬಂಧನ

►ಚರಣ್ ರಾಜ್, ಸುಮಂತ್ ಬರ್ಮನ್, ಅವಿನಾಶ ಬಂಧಿತ ಆರೋಪಿಗಳು


ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನ್ಯ ಕೋಮಿನ ವ್ಯಕ್ತಿಯ ಮೇಲೆ ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಗಳಲ್ಲಿ ಮೂವರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಚರಣ್ ರಾಜ್ ( 23), ಸುಮಂತ್ ಬರ್ಮನ್ (24), ಅವಿನಾಶ (24) ಬಂಧಿತ ಆರೋಪಿಗಳು.


ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್.ವಿ.ಶೆಟ್ಟಿ ಕಾಲೇಜು ರೋಡ್ ಬಳಿ ವ್ಯಕ್ತಿಯೊಬ್ಬರು ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಉರುಂದಾಡಿ ಗುಡ್ಡೆಯ ಚರಣ್, ಸುಮಂತ್ ಬರ್ಮನ್ ಹಾಗೂ ಕೋಡಿಕಲ್ ನ ಅವಿನಾಶ್ ಎಂಬವರು ಸ್ಕೂಟಿಯಲ್ಲಿ ಬಂದು ಅಡ್ಡಹಾಕಿ ತಡೆದು ತಲವಾರು ಬಿಸೀದ್ದಾರೆ. ಈ ವೇಳೆ ವ್ಯಕ್ತಿಯು ತಪ್ಪಿಸಿಕೊಂಡಿದ್ದಾರೆ. ಆದರೆ ಮುಖಕ್ಕೆ ಗಾಯವಾಗಿದೆ.


ಇನ್ನು ಕಾವೂರು ಪೊಲೀಸರು ಕಾರ್ಯಪ್ರವತ್ತರಾಗಿ ಕೇವಲ 24 ಗಂಟೆಗಳಲ್ಲಿ ತಲವಾರು ಸಮೇತ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Join Whatsapp
Exit mobile version