ಮಂಗಳೂರು: ಪವಿತ್ರ ರಮಝಾನ್ ತಿಂಗಳ ಪ್ರಥಮ ಚಂದ್ರದರ್ಶನವು ಮಾ.11ರ ರಾತ್ರಿ ಆಗುವ ಸಾಧ್ಯತೆ ಇದೆ.
ಹಾಗಾಗಿ ಚಂದ್ರದರ್ಶನದ ಬಗ್ಗೆ ಮಾಹಿತಿ ತಿಳಿದ ಮುಸ್ಲಿಮರು ದ.ಕ ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನಿರ್ದೇಶನದಂತೆ ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ (ಮೊ.ಸಂ: 9740799555/9448143937/ದೂ.ಸಂ: 0824 2428989) ಅವರ ಗಮನಕ್ಕೆ ತರುವಂತೆ ಪ್ರಕಟನೆ ತಿಳಿಸಿದೆ.