Home ಕರಾವಳಿ ಕರ್ಫ್ಯೂ ನಡುವೆ ಮಂಗಳೂರು ಪೊಲೀಸರ ಮಾನವೀಯ ಕಾರ್ಯ!

ಕರ್ಫ್ಯೂ ನಡುವೆ ಮಂಗಳೂರು ಪೊಲೀಸರ ಮಾನವೀಯ ಕಾರ್ಯ!

ಮಂಗಳೂರು : ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಎರಡು ದಿನಗಳ ವೀಕೆಂಡ್ ಲಾಕ್ ಡೌನ್ ನಿಂದಾಗಿ ಮಂಗಳೂರಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು,  ಈ ನಡುವೆ ನಗರದ ಕ್ಲಾಕ್ ಟವರ್ ಬಳಿಯ ಚೆಕ್ ಪೋಸ್ಟ್ ನ ಸಿಬ್ಬಂದಿಗಳಿಂದ ಮಾನವೀಯ ಕಾರ್ಯವೊಂದು ವ್ಯಾಪಕ ಪ್ರಶಂಷೆಗೆ ಕಾರಣವಾಗಿದೆ. ವಿಮಾನ ನಿಲ್ದಾಣಕ್ಕೆ ಹೋಗಲು ವಾಹನ ಇಲ್ಲದೆ ಪರದಾಡುತ್ತಿದ್ದ ವ್ಯಕ್ತಿಯನ್ನು ಸೇವಾ ನಿರತ ಪೊಲೀಸರು ನಿಲ್ದಾಣಕ್ಕೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೇರಳದಿಂದ ಮಂಗಳೂರಿಗೆ ರೈಲಿನ ಮೂಲಕ ಬಂದ ವ್ಯಕ್ತಿಯು ವಿಮಾನ ನಿಲ್ದಾಣಕ್ಕೆ ವಾಹನ ಸಿಗದೆ ಕ್ಲಾಕ್ ಟವರ್ ಬಳಿ ಪೊಲೀಸ್ ಚೆಕ್ ಪೋಸ್ಟ್ ಗೆ ಬಂದಿದ್ದು, ಬಳಿಕ ಪೊಲೀಸರೇ ತಮ್ಮ ವಾಹನದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವ್ಯಕ್ತಿಯನ್ನು ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Join Whatsapp
Exit mobile version