ಮಂಗಳೂರು: ಪಡೀಲ್ ಪೊಲೀಸ್ ಚೆಕ್‌ಪೋಸ್ಟ್ ಬಳಿ ಕಾರು ಢಿಕ್ಕಿಯಾಗಿ ಪಾದಚಾರಿ ಮೃತಪಟ್ಟು, ಪೊಲೀಸ್ ಗಾಯಗೊಂಡ ಘಟನೆ ರಾತ್ರಿ ನಡೆದಿದೆ.
ಒರಿಸ್ಸಾ ಮೂಲದ ದಂಡಸಿ ಮಾಲಿಕ್ (48) ಮೃತಪಟ್ಟವರು. ಚೆಕ್‌ಪೋಸ್ಟ್ ಬಳಿ ಕರ್ತವ್ಯದಲ್ಲಿದ್ದ ಹರೀಶ್ ಗಾಯಗೊಂಡವರು. ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.