►ಟ್ರೋಲ್ ಆಗುತ್ತಿದೆ ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಕಾಮಗಾರಿ
ಮಂಗಳೂರು: ನಗರದ ಹಂಪನಕಟ್ಟೆಯ ಸಿಗ್ನಲ್ ಬಳಿ ವೆನ್ಲಾಕ್ ನಿಂದ ನೆಹರೂ ಮೈದಾನಕ್ಕೆ ಹೋಗುವ ರಸ್ತೆಯಲ್ಲಿ ಝೀಬ್ರಾ ಕ್ರಾಸಿಂಗ್ ವ್ಯವಸ್ಥೆ ಮಾಡಲಾಗಿದೆ. ಆದರೆ ರಸ್ತೆಯ ಇನ್ನೊಂದು ಬದಿಯಲ್ಲಿ ಫುಟ್ ಪಾತ್ ಗೆ ಸ್ಟೀಲ್ ರಾಡ್ ಗಳ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದ್ದು, ಪದಚಾರಿಗಳು ಜಂಪ್ ಮಾಡಿ ನಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸ್ಟೀಲ್ ರಾಡ್ ಗಳ ಬ್ಯಾರಿಕೇಡ್ ಹಾಕುವ ಮೂಲಕ ಪಾದಚಾರಿಗಳು ರಸ್ತೆ ದಾಟಿ ಜಂಪ್ ಮಾಡಿ ನಡೆಯಬೇಕಾದ ವ್ಯವಸ್ಥೆಯನ್ನು ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿಯ ಇಂಜಿನಿಯರ್ ಗಳು ಕೊಡುಗೆಯಾಗಿ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟ್ರೋಲ್ ಗೆ ಒಳಗಾಗುತ್ತಿದೆ.
ಈ ಮಂಗಳೂರು ಸ್ಮಾಟ್ ಸಿಟಿ ಇಂಜಿನಿಯರ್ ಗಳಿಗೆ ನೆಹರೂ ಮೈದಾನದಲ್ಲಿ ಬಹಿರಂಗ ಸನ್ಮಾನ ಮಾಡುವ ಯೋಚನೆಯಿದೆ. ಕಾರ್ಯಕ್ರಮ ಮಾಡುವ ರೂಪುರೇಷೆ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗಡೆಯವರು ಫೇಸ್ ಬುಕ್ ನಲ್ಲಿ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಬರೆದುಕೊಂಡಿದ್ದಾರೆ.