Home ಕರಾವಳಿ ಮಂಗಳೂರು: ಹಾಸ್ಟೆಲ್​ನ ಬಾತ್​ರೂಮಿನಲ್ಲೇ ನರ್ಸಿಂಗ್​ ವಿದ್ಯಾರ್ಥಿನಿ ನೇಣಿಗೆ ಶರಣು

ಮಂಗಳೂರು: ಹಾಸ್ಟೆಲ್​ನ ಬಾತ್​ರೂಮಿನಲ್ಲೇ ನರ್ಸಿಂಗ್​ ವಿದ್ಯಾರ್ಥಿನಿ ನೇಣಿಗೆ ಶರಣು

ಮಂಗಳೂರು: ಹಾಸ್ಟೆಲ್ ಬಾತ್ ರೂಮಿನಲ್ಲೇ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು ಕೇರಳದ ಕಾಸರಗೋಡಿನ ತೂಂಬುಂಗಲ್ ಅರಿಂಬಾ ಕಡುಮೇನಿ ನಿವಾಸಿ ಮಂಗಳೂರಿನ ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ನೀನಾ (21) ಎಂದು ಗುರುತಿಸಲಾಗಿದೆ.

ಕಾಲೇಜಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ನೀನಾ ಬಾತ್‌ರೂಮ್‌ನಲ್ಲಿ ನೇಣುಬಿಗಿದುಕೊಂಡಿದ್ದು, ಇದನ್ನು ನೋಡಿದ ಜತೆಗಿದ್ದ ಇನ್ನೋರ್ವ ವಿದ್ಯಾರ್ಥಿನಿಯೂ ಆಘಾತದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ವಿಷಯ ತಿಳಿದ ಸಿಬ್ಬಂದಿ ಕೂಡಲೇ ಆಕೆಯನ್ನು ನೇಣು ಕುಣಿಕೆಯಿಂದ ಹೊರಕ್ಕೆ ತೆಗೆದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನೀನಾ ಮೃತಪಟ್ಟಿದ್ದಾರೆ. ಹಾಸ್ಟೆಲ್ ಸಿಬ್ಬಂದಿಯ ಮಾನಸಿಕ ಕಿರುಕುಳವೇ ಘಟನೆಗೆ ಕಾರಣ ಎಂದು ಇತರ ವಿದ್ಯಾರ್ಥಿಗಳು ದೂರಿದ್ದಾರೆ.

Join Whatsapp
Exit mobile version