ಮಂಗಳೂರಿನಲ್ಲಿ ನೈಟ್ ಕರ್ಫ್ಯೂ ಜಾರಿ | ಏನಿರತ್ತೆ, ಏನಿರಲ್ಲ ? ಕಮಿಷನರ್ ಮಾಹಿತಿ ಪತ್ರಿಕಾಗೋಷ್ಠಿ

Prasthutha|

ಮಂಗಳೂರು : ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸುವ ಕುರಿತು ತೀರ್ಮಾನಿಸಲಾಗಿದೆ. ರಾತ್ರಿ ಹತ್ತರಿಂದ ಮುಂಜಾನೆ ಐದರ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ರಾತ್ರಿ ವಾಹನ ಸಂಚಾರ, ಜನ ಸಂಚಾರ, ವಾಣಿಜ್ಯ ಕೇಂದ್ರ ಗಳು ಮುಚ್ಚಲೇಬೇಕಾಗುತ್ತದೆ. ರಾತ್ರಿ ಕಾರ್ಯಾಚರಿಸುವ ಸಂಸ್ಥೆಗಳ ಸಿಬ್ಬಂದಿಗಳು ಕರ್ಫ್ಯೂನ ಸಮಯಕ್ಕಿಂತ ಮುಂಚಿತವಾಗಿ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ.

- Advertisement -

ವೈದ್ಯಕೀಯ ಸೇವೆ ಸೇರಿದಂತೆ ತುರ್ತು ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇ ಕಾಮರ್ಸ್, ಆಹಾರ ಧಾನ್ಯಗಳ ವಸ್ತುಗಳ ಸಾಗಾಟ ವಾಹನಕ್ಕೆ ಕೂಡಾ ಅವಕಾಶವಿದೆ.  ದೂರದ ಪ್ರಯಾಣಕ್ಕೆ ಹೋಗುವವರು ತಮ್ಮ ಟಿಕೆಟುಗಳನ್ನು ಕಡ್ಡಾಯವಾಗಿ ತೋರಿಸಬೇಕಾಗುತ್ತದೆ.

ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 45 ಚೆಕ್ ಫೋಸ್ಟ್ ನಿರ್ಮಾಣ ಮಾಡಲಾಗಿದೆ. ಪ್ರತೀ ಚೆಕ್ ಪೋಸ್ಟ್ ನಲ್ಲಿ ಎಂಟರಿಂದ ಹತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದು, ಕೆ ಎಸ್ ಆರ್ ಪಿ, ಸಿ ಆರ್ ನ ತುಕಡಿಯನ್ನು ನೇಮಕ ಮಾಡಲಾಗಿದೆ. ಮನಪ ವ್ಯಾಪ್ತಿಯ ಹೊರಗಡೆ ಪ್ರದೇಶದಲ್ಲಿ ಚೆಕ್ ಪೋಸ್ಟ್ ಮಾಡಲಾಗಿದೆ. ಈ ಭಾಗದಲ್ಲಿ ಕೊರೋನಾ ಕರ್ಫ್ಯೂ ಇರುವುದಿಲ್ಲ.  ಆದರೆ ಅನಗತ್ಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕರ್ಫ್ಯೂ ಉಲ್ಲಂಘನೆ ಮಾಡಿದವರ ವಿರುದ್ದ ಎಂಡಿಎಂ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Join Whatsapp