Home ಕರಾವಳಿ ಮಂಗಳೂರು: ಸಂಚಾರ ಮಾರ್ಗದಲ್ಲಿ ಮಾರ್ಪಾಡು

ಮಂಗಳೂರು: ಸಂಚಾರ ಮಾರ್ಗದಲ್ಲಿ ಮಾರ್ಪಾಡು

ಮಂಗಳೂರು: ಮಂಗಳೂರು ತಾಲೂಕಿನ ಕಿಲ್ಪಾಡಿ, ಜಂಕ್ಷನ್ನಿಂದ ಕುಕ್ಕಟ್ಟೆ ರಸ್ತೆ ಕಿಮೀ 7.24 ನಿಂದ 8.74 ವರೆಗೆ (ಕುಕ್ಕಟ್ಟೆ ಜಂಕ್ಷನ್ನಿಂದ ಕೊಲ್ಲೂರು ಪದವು) ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಆದ ಕಾರಣ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು 2022ರ ಏಪ್ರಿಲ್ 30ರ ವರೆಗೆ ತಾತ್ಕಾಲಿಕವಾಗಿ ಮಾರ್ಪಡಿಸಲಾಗಿದೆ.


ಮಾರ್ಪಡಿಸಲಾದ ಮಾರ್ಗ ಇಂತಿದೆ: ಕುಕ್ಕಟ್ಟೆ ಜಂಕ್ಷನ್ನಿಂದ ಕೊಲ್ಲೂರು ಪದವು ಕಡೆಗೆ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಮುಲ್ಕಿ ಕಡೆಯಿಂದ ಕುಕ್ಕಟ್ಟೆ ಜಂಕ್ಷನ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಪಂಜಿನಡ್ಕ, ಬಳ್ಕುಂಜೆ, ಉಳೆಪ್ಪಾಡಿ ಮಾರ್ಗವಾಗಿ ಅಥವಾ ಕವತ್ತಾರು ದೇವಸ್ಥಾನ ರಸ್ತೆಯ ಮುಖಾಂತರ ಬಳ್ಕುಂಜೆ, ಉಳೆಪ್ಪಾಡಿ ಮಾರ್ಗವಾಗಿ ಕುಕ್ಕಟ್ಟೆ ಕಡೆಗೆ ಸಂಚರಿಸುವುದು.


ಕುಕ್ಕಟ್ಟೆ ಜಂಕ್ಷನ್ನಿಂದ ಮುಲ್ಕಿ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಉಳೆಪ್ಪಾಡಿ- ಬಳ್ಕುಂಜೆ-ಪಂಜಿನಡ್ಕ ಮಾರ್ಗವಾಗಿ ಮುಲ್ಕಿ ಕಡೆಗೆ ಸಂಚರಿಸುವಂತೆ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 21 ಪದವು ಪಶ್ಚಿಮ ವಾರ್ಡಿನ ಶಕ್ತಿನಗರ, ಕುಂಟಲ್ಪಾಡಿ, ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಕೈಗೊಳ್ಳಲಾಗುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು 2021ರ ಡಿ.30ರ ವರೆಗೆ ತಾತ್ಕಾಲಿಕವಾಗಿ ಮಾರ್ಪಡಿಸಲಾಗಿದೆ.
ಮಾರ್ಪಡಿಸಲಾದ ಮಾರ್ಗ ಇಂತಿದೆ: ಯೆಯ್ಯಾಡಿ, ಮೇರಿಹಿಲ್ ಕಡೆಯಿಂದ ಕುಂಟಲ್ಪಾಡಿ ರಸ್ತೆಯ ಮೂಲಕ ಶಕ್ತಿನಗರ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ದಂಡಕೇರಿ(ಕುಂಟಲ್ಪಾಡಿ) ಸೇತುವೆ ಬಳಿ ಬಲಕ್ಕೆ ತಿರುಗಿ ಕೊಡಂಗೆ ರಸ್ತೆಯ ಮೂಲಕ ಶಕ್ತಿನಗರ, ಬಿಕರ್ನಕಟ್ಟೆ ಹಾಗೂ ನಂತೂರು ಕಡೆಗೆ ಸಂಚರಿಸುವುದು.


ಶಕ್ತಿನಗರ ಕಡೆಯಿಂದ ಯೆಯ್ಯಾಡಿ, ಮೇರಿಹಿಲ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಕೊಡಂಗೆ ರಸ್ತೆ ಮೂಲಕ ಯೆಯ್ಯಾಡಿ, ಆದಿತ್ಯನಗರ ರಸ್ತೆಯ ಮೂಲಕ ಮೇರಿಹಿಲ್ ಕಡೆಗೆ ಸಂಚರಿಸಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version