Home ಕರಾವಳಿ ಮಂಗಳೂರು: ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ಸಿರಾಜುದ್ದೀನ್ ಎ. ಆಯ್ಕೆ

ಮಂಗಳೂರು: ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ಸಿರಾಜುದ್ದೀನ್ ಎ. ಆಯ್ಕೆ

ಮಂಗಳೂರು: ಮಂಗಳೂರಿನ ನ್ಯಾಯವಾದಿ ಸಿರಾಜುದ್ದೀನ್ ಎ. ಅವರು 2022ರ ಸಾಲಿನ ನೇರ ನೇಮಕಾತಿಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಕಳೆದ 16 ವರ್ಷಗಳಿಂದ ಮಂಗಳೂರಿನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಇವರು ಮಂಗಳೂರಿನ ಖ್ಯಾತ ನ್ಯಾಯವಾದಿಗಳಾದ ಅರುಣ್ ಬಂಗೇರ ಮತ್ತು ಅರುಣ್ ಕುಮಾರ್ ಶೆಟ್ಟಿಯವರ ಜೂನಿಯರ್ ನ್ಯಾಯವಾದಿಯಾಗಿ ಗುರುತಿಸಿಕೊಂಡಿದ್ದರು. ಮೂಲತಃ ಬೆಳ್ತಂಗಡಿ ತಾಲೂಕಿನವರಾದ ಇವರು ಇಳಂತಿಲದ ಇದ್ದಿನಬ್ಬ ಬ್ಯಾರಿ ಮತ್ತು ಮೈಮುನ ದಂಪತಿ ಸುಪುತ್ರರಾಗಿದ್ದಾರೆ. ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜ್ ನಲ್ಲಿ ಕಾನೂನು ಪದವಿ ಪಡೆದ ಇವರು ಮಡಂತ್ಯಾರ್ ನ ಸೆಕ್ರೆಡ್ ಹಾರ್ಟ್ ಕಾಲೇಜ್ ನಲ್ಲಿ ಬಿ. ಎ. ಡಿಗ್ರಿ ಓದಿದ್ದರು.


ಪದ್ಮುಂಜದ ಸರಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ಪಿಯುಸಿ ಓದಿದ ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉರುವಲುನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದಾರೆ. ಇವರು ಮಂಗಳೂರು ಬಾರ್ ಅಸೋಸಿಯೇಶನ್ ನ ಸದಸ್ಯರಾಗಿದ್ದಾರೆ.

Join Whatsapp
Exit mobile version