Home ಕರಾವಳಿ ಮಂಗಳೂರಿನಲ್ಲಿ ಸಕ್ರಿಯ ಹವಾಲಾ ಜಾಲ, ನಾಲ್ವರ ಸೆರೆ : ಕಮಿಷನರ್ ಶಶಿಕುಮಾರ್ ಮಾಹಿತಿ

ಮಂಗಳೂರಿನಲ್ಲಿ ಸಕ್ರಿಯ ಹವಾಲಾ ಜಾಲ, ನಾಲ್ವರ ಸೆರೆ : ಕಮಿಷನರ್ ಶಶಿಕುಮಾರ್ ಮಾಹಿತಿ

ಮಂಗಳೂರು : ಹವಾಲಾ ಜಾಲದ ವಹಿವಾಟನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದು ತನಿಖೆಯಲ್ಲಿ ದೂರುದಾರನೇ ಪ್ರಕರಣದಲ್ಲಿ ಶಾಮೀಲಾಗಿರುವುದು ಕಂಡುಬಂದಿದೆ‌ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ‌ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾರ್ಚ್ 4ರಂದು ಪಾಂಡೇಶ್ವರ ಠಾಣೆಯಲ್ಲಿ ಅಬ್ದುಲ್ ಸಲಾಂ ಎಂಬಾತ 16.20 ಲಕ್ಷ ಹಣ ದರೋಡೆ ಆಗಿರುವ ಬಗ್ಗೆ ದೂರು ನೀಡಿದ್ದ.

ತಂಗಿಯ ಮಗಳ ಮದುವೆಗೆಂದು ಕೊಂಡೊಯ್ಯುತ್ತಿದ್ದ ಹಣವನ್ನು ಯಾರೋ ದುಷ್ಕರ್ಮಿಗಳು ದೋಚಿದ್ದಾರೆ ಎಂದು ತಿಳಿಸಿದ್ದ. ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಐದು ಮಂದಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಮುಹಮ್ಮದ್ ರಿಫಾದ್, ರಶೀದ್, ಅಷ್ಫಾಕ್, ಜಾಫರ್ ಸಾದಿಕ್, ಮಹಮ್ಮದ್ ಇಸ್ಮಾಯಿಲ್ ಮತ್ತು ಕೆ.ಎಚ್.ಮಯ್ಯದ್ದಿ ಎಂಬವರು ಬಂಧಿತರಾಗಿದ್ದು, ಅವರನ್ನು ವಿಚಾರಣೆ ನಡೆಸಿದಾಗ ಸತ್ಯವಿಚಾರ ಬಾಯಿಬಿಟ್ಟಿದ್ದಾರೆ. ಇವರೆಲ್ಲಾ ಹವಾಲಾ ಹಣ ಸಾಗಿಸುತ್ತಿದ್ದ ಜಾಲದ ಏಜಂಟರಾಗಿದ್ದು, ತಿಂಗಳಿಗೆ ಎಂಟು ಸಾವಿರ ಹಣಕ್ಕಾಗಿ ದುಡಿಯುತ್ತಿದ್ದರು. ಇದರ ಜೊತೆಗೆ ಆಯಾ ದಿನದ ಹಣದ ವಹಿವಾಟಿನ ಮೇಲೆ ಐನೂರು, ಒಂದು ಸಾವಿರ ಕಮಿಷನ್ ಪಡೆಯುತ್ತಿದ್ದರು. ದಿನದಲ್ಲಿ ಲಕ್ಷಾಂತರ ಹಣದ ನಗದು ವಹಿವಾಟು ನಡೆಯುತ್ತಿತ್ತು. ಇದೇ ವೇಳೆ, ಮಹಮ್ಮದ್ ಇಸ್ಮಾಯಿಲ್ ಹಣವನ್ನು ದೋಚುವ ಪ್ಲಾನ್ ಹಾಕಿದ್ದು ದರೋಡೆ ನಾಟಕವಾಡಿದ್ದಾರೆ. ಈ ದರೋಡೆಯಲ್ಲಿ ಪಾಲು ಪಡೆದಿದ್ದ ಅಬ್ದುಲ್ ಸಲಾಂ ಬಳಿಕ ಪೊಲೀಸರಿಗೆ ದೂರು ನೀಡಿದ್ದ‌ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.

ಮಂಗಳೂರು ಹವಾಲಾ ಜಾಲದ ಬಂಧನ : ಕಮಿಷನರ್ ಶಶಿಕುಮಾರ್ ಪತ್ರಿಕಾಗೋಷ್ಠಿ | Mangalore Police Commissioner on Hawala
Join Whatsapp
Exit mobile version