ಮಂಗಳೂರು ಗೋಲಿಬಾರ್, ಪೊಲೀಸ್ ಕ್ರೌರ್ಯತೆಗೆ ಎರಡು ವರ್ಷ| ಕ್ಯಾಂಪಸ್ ಫ್ರಂಟ್ ನಿಂದ ಪ್ರತಿಭಟನಾ ಪ್ರದರ್ಶನ

Prasthutha: December 20, 2021

ಮಂಗಳೂರು: ಮಂಗಳೂರಿನಲ್ಲಿ CAA, NRC ವಿರುದ್ದ ಶಾಂತಿಯುತ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲೆ ಡಿಸೆಂಬರ್ 19,2019 ರಂದು ಗೋಲಿಬಾರ್ ನಡೆಸಿ ಎರಡು ಅಮಾಯಕ ಜೀವವನ್ನು ಬಲಿತೆಗೆದ ಪೊಲೀಸ್ ಕ್ರೌರ್ಯತೆಗೆ ಎರಡು ವರ್ಷಗಳಾಗಿದ್ದು, ಅದನ್ನು ಮರು ನೆನಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಸಿದೆ.

  ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಮಾತನಾಡಿ ಈ ಒಂದು ದಿನವನ್ನು ನಾವೆಂದೂ ಮರೆಯುವುದಿಲ್ಲ, ಜಿಲ್ಲೆಗೆ ಇದೊಂದು ಕರಾಳ ದಿನವಾಗಿದೆ. ಅಮಾಯಕ ನೌಶೀನ್ ಹಾಗೂ ಜಲೀಲ್ ರನ್ನು ಗೋಲಿಬಾರ್ ನಡೆಸಿ ಕೊಂದಂತಹ ಪೊಲೀಸ್ ಕ್ರೂರರಿಗೆ ಹಾಗೂ ನೇತೃತ್ವ ನೀಡಿದ ಅಂದಿನ ಕಮಿಷನರ್ ಹರ್ಷರವರಿಗೆ ಕಾನೂನಿನ ಮುಖಾಂತರ ಉತ್ತರ ನೀಡಿಯೇ ತೀರುವೆವು ಎಂದರು. ನಂತರ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ, ನಿಮ್ಮಯ ಲಾಠಿ ಹಾಗೂ ಗೋಲಿಬಾರ್ ಗಳ ಮುಖಾಂತರ ಇಂತಹ ನ್ಯಾಯಪರ ಹೋರಾಟಗಳನ್ನು ಧಮನಿಸಬಹುದೆಂಬ ನಿಮ್ಮಯ ಹಗಲು ಕನಸು ಬಿಟ್ಟುಬಿಡಿ, ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಮೊನ್ನೆಯ ರೈತರ ಹೋರಾಟದವರೆಗೆ ಹೋರಾಟಗಳು ಸೋತಿಲ್ಲ, ಸೋಲುವುದು ಕೂಡ ಇಲ್ಲ ಎಂದರು.

 ಈ ಸಂದರ್ಭದಲ್ಲಿ ಮಂಗಳೂರು ನಗರ ಜಿಲ್ಲಾಧ್ಯಕ್ಷ ಸರಫುದ್ದೀನ್, ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೊಡಿ,ಜಿಲ್ಲಾ ಮುಖಂಡರಾದ ಅರ್ಫೀದ್ ಅಡ್ಕಾರ್, ರಿಯಾಝ್ ಅಂಕತ್ತಡ್ಕ,ಅಶ್ಫಕ್ ಬಂಟ್ವಾಳ,ಫಯಾಝ್ ವಿಟ್ಲ, ಸರ್ಫರಾಝ್ ಅಂಗರಗುಂಡಿ, ಮುಕ್ತಾರ್ ಕಲ್ಲಡ್ಕ ಉಪಸ್ಥಿತರಿದ್ದರು. ಜಿಲ್ಲಾ ಮುಖಂಡ ಶಂಸುದ್ದೀನ್ ನಿರೂಪಿಸಿದರು.

ಗೋಲಿಬಾರ್ ಅಣುಕು ಪ್ರದರ್ಶನ

ಪ್ರತಿಭಟನಾ ಸ್ಥಳದಲ್ಲೇ ಗೋಲಿಬಾರ್ ನಡೆಸಿದ ಘಟನೆಯನ್ನು ಅಣುಕು ಪ್ರದರ್ಶನದ ಮೂಲಕ ಮತ್ತೆ ಪೋಲಿಸ್ ಕ್ರೌರ್ಯತೆಯನ್ನು ನೆನಪಿಸಲಾಯಿತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!