SSLC ಪಠ್ಯವನ್ನು ಚಿತ್ರದಲ್ಲಿ ಬಿಡಿಸಿ ದಾಖಲೆ ಬರೆದ ಮಂಗಳೂರಿನ ಆದಿ ಸ್ವರೂಪ!

Prasthutha|

ಮಂಗಳೂರು : SSLC ಪಠ್ಯವನ್ನು ಚಿತ್ರದಲ್ಲಿ ಬಿಡಿಸಿ ಮಂಗಳೂರು ಮೂಲದ ಆದಿ ಸ್ವರೂಪ ಎಂಬ ಬಾಲಕಿ ದಾಖಲೆ ಬರೆದಿದ್ದಾಳೆ.

- Advertisement -

SSLCಯ  ಆರು ವಿಷಯಗಳ ಸಂಪೂರ್ಣ ಪಠ್ಯವನ್ನು ಕೇವಲ A4 ಗಾತ್ರದ ಎಂಟು ಹಾಳೆಗಳಲ್ಲಿ ಚಿತ್ರ ಬಿಡಿಸಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ದಾಖಲೆಯನ್ನು ಬರೆದಿದ್ದಾಳೆ. ಸೋಮವಾರ SSLC ಪರೀಕ್ಷೆ ನಡೆಯಲಿದ್ದು, ಗರಿಷ್ಠ ಅಂಕ ಪಡೆದು ಉತ್ತೀರ್ಣಳಾಗುವ ವಿಶ್ವಾಸವಿದೆ ಎಂದು ಸ್ವರೂಪ ಹೇಳಿದ್ದಾಳೆ.

ಸ್ಮರಣ ಶಕ್ತಿ ಮತ್ತು ಮೆದುಳು ಚುರುಕಿಗೆ ಚಿತ್ರಗಳು ಸಹಕಾರಿಯಾಗುತ್ತವೆ. ಇದು ವಿಶುವಲ್ ಆರ್ಟ್ ಮಾದರಿಯಾಗಿದ್ದು, ಇತರ ಮಕ್ಕಳಿಗೂ ಮುಂದೆ ಪ್ರಯೊಜನವಾಗಲಿ ಎಂದು ದಾಖಲೆ ಮಾಡಿರುವುದಾಗಿ ಆದಿ ಸ್ವರೂಪ ತಿಳಿಸಿದ್ದಾಳೆ.

Join Whatsapp