ಮಂಗಳೂರು : ಹೈಪರ್ ಮಾರ್ಕೆಟಿನಲ್ಲಿ ಬೆಂಕಿ ಅವಘಡ !
Prasthutha: April 15, 2021

ಮಂಗಳೂರಿನ ಬಲ್ಲಾಳ್ ಬಾಗಿನಲ್ಲಿರುವ ಫೀಲ್ಡ್ ಸ್ಟಾರ್ ಹೈಪರ್ ಮಾರ್ಕೆಟಿನಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ ಎಂದು ಶಂಕಿಸಲಾಗಿದ್ದು, ಹೈಪರ್ ಮಾರ್ಕೆಟ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಸ್ಥಳಕ್ಕೆ ಮಂಗಳೂರು ಅಗ್ನಿಶಾಮಕದಳವು ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದೆ. ಅವಘಡದಿಂದ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.
