ಮಂಗಳೂರು: ಸುರತ್ಕಲ್’ನ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಬಳಿಕ ಜಾಮೀನು ಪಡೆದು ಹೊರಬಂದ ಬಂಟ್ವಾಳ ಮೂಲದ ಹರ್ಷಿತ್ ಎಂಬಾತ ಹಣ ನೀಡುವಂತೆ ವ್ಯಕ್ತಿಯೋರ್ವರಿಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದು, ಈ ಕುರಿತು ಸಂತ್ರಸ್ತ ವ್ಯಕ್ತಿ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹರ್ಷಿತ್ ಎಂಬ ವ್ಯಕ್ತಿ ಫೆಬ್ರವರಿ 2 ರಂದು ನನಗೆ ಕರೆ ಮಾಡಿದ್ದು, ನಾನು ಫಾಝಿಲ್ ಕೊಲೆಯಲ್ಲಿ ಜೈಲಿಗೆ ಹೋಗಿ ಬಂದವನು. ನನಗೆ ಹಾಗೂ ಜೈಲಿನಲ್ಲಿ ಇರುವವರಿಗೆ ನೀವು ಹಣದ ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ಧಾನೆ. ಇದಕ್ಕೆ ವ್ಯಕ್ತಿಯು ನಿರಾಕರಿಸಿದ್ದು, ನಂತರ ಪದೇ ಪದೇ ಕರೆ ಮಾಡಿದ್ದಲ್ಲದೇ ಹಣ ಕೊಡದಿದ್ದರೆ ಮುಂದೆ ಸಮಸ್ಯೆಯಾಗಬಹುದು. ಅದಕ್ಕೆ ನಮ್ಮನ್ನು ದೂರಬೇಡಿ ಎಂದು ಬೆದರಿಕೆ ಹಾಕಿ ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ವ್ಯಕ್ತಿಯು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ಧಾರೆ.
ಹರ್ಷಿತ್, ಫಾಝಿಲ್ ಹತ್ಯೆಗೈದ ಹಂತಕರಿಗೆ ಆಶ್ರಯ ನೀಡಿದ್ದು, ಈತ ಸೆಪ್ಟಂಬರ್ ನಲ್ಲಿ ಜಾಮೀನನ ಮೇಲೆ ಬಿಡುಗಡೆಯಾಗಿದ್ದನು.