ಮಂಗಳೂರು: ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ 20 ಲೋಕಸಭಾ ಸ್ಥಾನ ಗೆಲ್ಲಿಸಿಕೊಡ್ತಾರೆ ಎಂಬ ವಿಶ್ವಾಸ ನನಗಿದೆ. ಹೀಗಾಗಿ ಮಂಗಳೂರು, ಉಡುಪಿ ಜಿಲ್ಲೆಯ ಜನ ಗೆಲ್ಲೋಕೆ ಆಗಲ್ಲ ಎಂದು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು,
ಇದು ಐತಿಹಾಸಿಕ ದಿನ
ಮಂಗಳೂರು ಐತಿಹಾಸಿಕವಾದ ಭೂಮಿ, ಕೋಟಿಚೆನ್ನಯ್ಯ, ರಾಣಿ ಅಬ್ಬಕ್ಕ ಅವರ ಹೋರಾಟದ ಭೂಮಿ.
ನಾರಾಯಣ ಗುರುಗಳ ಸಾಮಾಜಿಕ ಬದಲಾವಣೆಯ ಭೂಮಿ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ತಾಣ,
ಮಂಗಳೂರಿನ ಹಿರಿಯ ನಾಯಕರಾದ ಆಸ್ಕರ್, ಜನಾರ್ದನ ಪೂಜಾರಿ, ವೀರಪ್ಪ ಮೊಯಿಲಿ ಅವರು ನೂರಾರು ನಾಯಕರನ್ನು ತಯಾರು ಮಾಡಿದವರು. ಜನಾರ್ದನ ಪೂಜಾರಿಯವರು ಬ್ಯಾಂಕ್‌ಗಳನ್ನು ಬಡವರ ಪಾಲಿಗೆ ತೆರೆದುಕೊಟ್ಟವರು
ಸಾಲಮೇಳದ ಕಾರ್ಯಕ್ರಮ ಮಾಡಿ ಬಡವರಿಗೆ ಆರ್ಥಿಕ ಶಕ್ತಿ ತುಂಬಿದರು ಎಂದರು.
ಪೂಜಾರಿಯವರನ್ನು ಕರೆದುಕೊಂಡು ಹೋಗಿ ಕನಕಪುರದಲ್ಲಿ ಸಾಲಮೇಳ ಮಾಡಿದ್ದೆ. ಆ ಸಾಲಮೇಳದ ಪರಿಣಾಮ ನಾನು ಜಿ.ಪಂ ಸದಸ್ಯ, ಶಾಸಕನಾಗಿ ಆಯ್ಕೆಯಾದೆ ಎಂದರು.
ಇದೇ ಸಹ್ಯಾದ್ರಿ ಮೈದಾನದಲ್ಲಿ ರಾಹುಲ್ ಗಾಂಧಿ ಅವರು ಶಕ್ತಿ ಯೋಜನೆ ಘೋಷಿಸಿದ್ದರು. ಇದೇ ಪುಣ್ಯ ಭೂಮಿಯಲ್ಲಿ ಘೋಷಿಸಿದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ ಬಂದಿದೆ. ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರ ಭೇಟಿ ಹೆಚ್ಚಳ ಆಗಿದೆ. ಬಿಜೆಪಿ ಕೊಟ್ಟ ಭರವಸೆ ಈಡೇರಿಸಿಲ್ಲ, 15 ಲಕ್ಷ ಬಂದಿಲ್ಲ, ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸಿದೆ. ಮಂಗಳೂರು ಉಡುಪಿ ಜಿಲ್ಲೆಯ ಜನರು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಕರಾವಳಿ ಮಲೆನಾಡಿನ ಜನರು
ಸರ್ಕಾರದ ಗ್ಯಾರಂಟಿ ಯೋಜನೆಯ ಉಪಕಾರ ತೀರಿಸುತ್ತಾರೆ ಎಂಬ ಭರವಸೆ ಇದೆ ಎಂದರು.
ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ 20 ಲೋಕಸಭಾ ಸ್ಥಾನ ಗೆಲ್ಲಿಸಿಕೊಡ್ತಾರೆ ಎಂಬ ವಿಶ್ವಾಸ ನನಗಿದೆ. ಮೋದಿಯವರು ಹೇಳಿದಂತೆ ಬಿಜೆಪಿ 370 ಸೀಟ್ ಗೆಲ್ಲಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂದರು.
ಗಾಂಧಿಜೀ ಕೂತಿದ್ದ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ನಮ್ಮ ರಾಜ್ಯದ ಖರ್ಗೆ ಅವರು ಕೂತಿದ್ದಾರೆ. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ವಿಪಕ್ಷಗಳು ಏನೇ ಕುತಂತ್ರ ಮಾಡಿದರೂ ಸರ್ಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ನಮ್ಮ ಸರ್ಕಾರಕ್ಕೆ 136+2 ಶಾಸಕರ ಬೆಂಬಲ ಇದೆ ಎಂದು ಹೇಳಿದ್ದಾರೆ.