Home ಟಾಪ್ ಸುದ್ದಿಗಳು ಮಂಗಳೂರು | ಕಂಡಕ್ಟರ್ ಸಾವು ಪ್ರಕರಣ: ಖಾಸಗಿ ಬಸ್‌ಗೆ ಡೋರ್ ಕಡ್ಡಾಯ; ಕಮಿಷನರ್ ಆದೇಶ

ಮಂಗಳೂರು | ಕಂಡಕ್ಟರ್ ಸಾವು ಪ್ರಕರಣ: ಖಾಸಗಿ ಬಸ್‌ಗೆ ಡೋರ್ ಕಡ್ಡಾಯ; ಕಮಿಷನರ್ ಆದೇಶ

ಮಂಗಳೂರು: ನಂತೂರಿನಲ್ಲಿ ಖಾಸಗಿ ಬಸ್ ಕಂಡಕ್ಟರ್ ನಿಧನ ಹಿನ್ನೆಲೆಯಲ್ಲಿ ಎಲ್ಲಾ ಖಾಸಗಿ ಬಸ್‌ಗಳಿಗೆ ಇನ್ನು ಮುಂದೆ ಡೋರ್ ಕಡ್ಡಾಯವಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಕುಲ್‌ದೀಪ್ ಕುಮಾರ್ ಜೈನ್ ಆದೇಶ ಹೊರಡಿಸಿದ್ದಾರೆ.

ಕಂಡಕ್ಟರ್ ಸೇರಿ ಯಾರು ಕೂಡಾ ಫುಟ್‌ಬೋರ್ಡ್‌ನಲ್ಲಿ ನಿಲ್ಲುವಂತಿಲ್ಲ. ಸಮಯ ಫಾಲೋ ಮಾಡಬೇಡಿ, ಸೇಫ್ಟಿ ಮೊದಲು ಕಾಯ್ದುಕೊಳ್ಳಿ ಎಂದು ಅವರು ತಿಳಿಸಿದ್ದಾರೆ.

ಖಾಸಗಿ ಬಸ್ಸಿನ ಬಾಗಿಲಿನಲ್ಲಿ ನೇತಾಡುತ್ತಿದ್ದ ಬಸ್ ಕಂಡಕ್ಟರ್ ಹೊರಕ್ಕೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ನಗರದ ನಂತೂರು ವೃತ್ತದಲ್ಲಿ ಮಂಗಳವಾರ ನಡೆದಿದೆ.

Join Whatsapp
Exit mobile version