ಮಂಗಳೂರು | ಕಾರ್ಮಿಕನನ್ನು ಸುಟ್ಟು ಹಾಕಿ ಕೊಲೆ: ವಿದ್ಯುತ್‌ ಸ್ಪರ್ಶವೆಂದು ಬಿಂಬಿಸಲು ಯತ್ನಿಸಿದ ಅಂಗಡಿ ಮಾಲಕನ ಬಂಧನ

Prasthutha|

- Advertisement -

ಮಂಗಳೂರು: ಕಾರ್ಮಿಕನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ‌ಮಾಡಿರುವ ಘಟನೆ ನಗರದ ಮುಳಿಹಿತ್ಲುವಿನಲ್ಲಿ ನಡೆದಿದೆ.

ಉತ್ತರ ಭಾರತ ಮೂಲದ ಗಜ್ಞಾನ್ ಅಲಿಯಾಸ್ ಜಗು ಎಂಬ ಕಾರ್ಮಿಕನನ್ನು ಮಶುಪಾ ಜನರಲ್ ಸ್ಟೋರ್ ಮಾಲೀಕ ತೌಸಿಫ್ ಹುಸೈನ್ ಎಂಬಾತ ಕೊಲೆ ಮಾಡಿರುವುದಾಗಿ ಹೇಳಲಾಗಿದೆ.

- Advertisement -

ಬೆಂಕಿ ಹಚ್ಚಿ ಕೊಂದ ಬಳಿಕ ಆರೋಪಿ ವಿದ್ಯುತ್ ಶಾಕ್ ಎಂದು ಪೊಲೀಸ್ ದೂರು ನೀಡಿದ್ದಾನೆ. ಶನಿವಾರ ಬೆಳಗ್ಗೆ 7.30 ಕ್ಕೆ ಕೃತ್ಯ ಎಸಗಿದ್ದು, ಬಳಿಕ ಮಧ್ಯಾಹ್ನ 1.30 ಕ್ಕೆ ವೆನ್ಲಾಕ್ ಆಸ್ಪತ್ರೆಗೆ ರವಾನೆ ಮಾಡಿ ವಿದ್ಯುತ್ ಶಾಕ್ ನಿಂದ ಘಟನೆ ಅಂತಾ ತಿರುಚಲು ಯತ್ನಿಸಿದ್ದಾನೆ.

ಆದರೆ ಪೊಲೀಸರ ಅನುಮಾನದಿಂದ ವಿಚಾರಿಸಿದಾಗ ಕೃತ್ಯ ಬಯಲಾಗಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ತೌಸಿಫ್ ಹುಸೈನ್ ಅನ್ನು ಪೊಲೀಸರು ಬಂಧಿಸಿದ್ದಾರೆ.