ಮಂಗಳೂರು: ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಿ ಸಾರ್ವಜನಿಕಗೊಳಿಸಬೇಕು, ಮುಸ್ಲಿಮರ 2B ಮೀಸಲಾತಿಯನ್ನು ಶೇಕಡಾ 8% ಕ್ಕೆ ಏರಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯಾಧ್ಯಂತ ಅಕ್ಟೋಬರ್ 9 ರಿಂದ 13ರ ವರೆಗೆ ದರಣಿ, ಹಕ್ಕೊತ್ತಾಯ ಸಭೆ, ವಿಚಾರ ಸಂಕಿರಣ, ಟ್ವೀಟ್ಟರ್ ಕ್ಯಾಂಪೇನ್‌ಗಳನ್ನು ಹಮ್ಮಿಕೊಂಡಿದೆ.
ಅಕ್ಟೋಬರ್ 9 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಉದ್ಘಾಟನೆಗೊಂಡ ಅಭಿಯಾನವು ರಾಜ್ಯಾಧ್ಯಂತ ಜಿಲ್ಲಾ ಸಮಿತಿಗಳ ವತಿಯಿಂದ ಕಾರ್ಯಕ್ರಮಗಳು ನಡೆಯುತ್ತಿದೆ. ಇದರ ಭಾಗವಾಗಿ ಸಮಾರೋಪ ಕಾರ್ಯಕ್ರಮ ಅಕ್ಟೋಬರ್ 13 ಶುಕ್ರವಾರ ಮಂಗಳೂರಿನಲ್ಲಿ ನಡೆಯಲಿದೆ.
ದಕ್ಕಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ನೇತ್ರತ್ವದಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಮಿನಿ ವಿಧಾನಸೌಧದ ಮುಂಬಾಗದಲ್ಲಿ ದರಣಿ ಸತ್ಯಾಗ್ರಹವನ್ನು ಎಸ್‌ಡಿಪಿಐ ರಾಷ್ಟಿಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಉದ್ಘಾಟಿಸಲಿದ್ದಾರೆ. ರಾಷ್ಟಿಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಸೇರಿದಂತೆ ವಿವಿಧ ನಾಯಕರು ಉಪಸ್ಥಿತರಿರಲಿದ್ದಾರೆ.
ಅಪರಾಹ್ನ 3 ಗಂಟೆಗೆ ನಡೆಯುವ ಹಕ್ಕೊತ್ತಾಯ ಸಭೆಯಲ್ಲಿ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರಿ ಬಿ.ಆರ್ ಭಾಸ್ಕರ್ ಪ್ರಸಾದ್ ಸೇರಿದಂತೆ ರಾಷ್ಟೀಯ ಹಾಗೂ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ.
ಅಲ್ಲದೆ, ಈ ಧರಣಿ ಹಾಗೂ ಹಕ್ಕೊತ್ತಾಯ ಸಭೆಯಲ್ಲಿ ನಾಡಿನ ವಿವಿದ ಸಂಘಟಣೆಗಳ ಮುಖಂಡರು, ಹೋರಾಟಗಾರರು, ರಾಜಕೀಯ ದುರೀಣರು ಭಾಗವಹಿಸಲಿದ್ದಾರೆ. ಈ ಧರಣಿಗೆ ಸಂವಿದಾನ ಪ್ರೇಮಿಗಳಾದ ನಾಡಿನ ಸರ್ವ ಜನತೆ ಜಾತಿ, ಮತ, ಪಕ್ಷ, ಭೇದ ಮರೆತು ಭಾಗವಹಿಸಿ ಸಹಕರಿಸಬೇಕೆಂದು ಎಸ್‌ಡಿಪಿಐಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.