Home ಕರಾವಳಿ ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಯ್ ಕೈ; ಹಿರಿಯರು-ಕಿರಿಯರ ನಡುವೆ ಜಟಾಪಟಿ

ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಯ್ ಕೈ; ಹಿರಿಯರು-ಕಿರಿಯರ ನಡುವೆ ಜಟಾಪಟಿ

ಮಂಗಳೂರು: ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಯುವ ಕಾಂಗ್ರೆಸ್ ಹಾಗೂ ರಮಾನಾಥ್ ರೈ ಬಣದ ನಡುವೆ ಜಟಾಪಟಿ ನಡೆದ ಬಗ್ಗೆ ವರದಿಯಾಗಿದೆ.

ಗಣರಾಜ್ಯೋತ್ಸವ ಪರೇಡಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರದ ನಡೆಯನ್ನು ಖಂಡಿಸಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು “ನಾರಾಯಣ ಗುರು ಕಡೆಗೆ ನಮ್ಮ ನಡಿಗೆ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಈ ಘಟನೆ ನಡೆದಿದೆ.

ಮಾಜಿ ಸಚಿವರಾದ ಯು.ಟಿ ಖಾದರ್, ರಮಾನಾಥ ರೈ, ಮಾಜಿ ಶಾಸಕ ಐವನ್ ಡಿಸೋಜಾ, ಪಿವಿ ಮೋಹನ್ ಅವರ ಸಮ್ಮುಖದಲ್ಲೇ ಈ ಘರ್ಷಣೆ ನಡೆದಿದ್ದು, ಬಳಿಕ ಹಿರಿಯ ನಾಯಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ.

ಬಳಿಕ ನಿಗದಿಯಂತೆ “ನಾರಾಯಣ ಗುರು ಕಡೆಗೆ ನಮ್ಮ ನಡಿಗೆ’ ಪಾದಯಾತ್ರೆ ನಡೆಯಿತು.

Join Whatsapp
Exit mobile version