Home ಟಾಪ್ ಸುದ್ದಿಗಳು ಮಂಗಳೂರು: ಸರ್ಕಿಟ್ ಹೌಸ್ – ಬಿಜೈ ರಸ್ತೆಗೆ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಹೆಸರು

ಮಂಗಳೂರು: ಸರ್ಕಿಟ್ ಹೌಸ್ – ಬಿಜೈ ರಸ್ತೆಗೆ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಹೆಸರು

ಮಂಗಳೂರು: ನಗರದ ಸರ್ಕಿಟ್ ಹೌಸ್ – ಬಿಜೈ ರಸ್ತೆ ಲೋಕಸಭಾ ಚುನಾವಣೆ ಬಳಿಕ ಜಾರ್ಜ್ ಫೆರ್ನಾಂಡಿಸ್ ರಸ್ತೆ ಎನಿಸಿಕೊಳ್ಳಲಿದೆ. ಮಾಜಿ ರಕ್ಷಣಾ ಸಚಿವ ದಿ. ಜಾರ್ಜ್ ಫೆರ್ನಾಂಡಿಸ್ ನಾಮಕರಣ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು,ಲೋಕಸಭಾ ಚುನಾವಣೆ ಬಳಿಕ ಈ ರಸ್ತೆಯ ಹೆಸರು ಅಧಿಕೃತ ನಾಮಫಲಕದೊಂದಿಗೆ ಹಾಕಲಾಗುವುದು ಎಂದು ಮಂಗಳೂರು ಮೇಯ‌ರ್ ಸುಧೀ‌ರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ರಸ್ತೆ ಮರು ನಾಮಕರಣದ ಬಗ್ಗೆ ತಕ್ಷಣ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ಧನ್ಯವಾದಗಳು ಎಂದು ಹೇಳಿದರು.

ಮಂಗಳೂರಿನ ಬಿಜೈ ಪರಿಸರದಲ್ಲಿ ಹುಟ್ಟಿದ ಜಾರ್ಜ್ ಫೆರ್ನಾಂಡಿಸ್ ಒಂಬತ್ತು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಕಾರ್ಮಿಕ ನಾಯಕರಾಗಿದ್ದಾರೆ. ಕೊಂಕಣ್ ರೈಲ್ವೆ ಹರಿಕಾರರಾಗಿದ್ದಾರೆ. ಪದ್ಮವಿಭೂಷಣ ನೀಡಲಾಗಿದೆ ಎಂದರು.

ಮಂಗಳೂರು ಮನಪಾ ಸಾಮಾನ್ಯ ಸಭೆಯಲ್ಲಿ ಜಯಾನಂದ್ ಅಂಚನ್ ಅವಧಿಯಲ್ಲಿ ಈ ಬಗ್ಗೆ ಮನವಿ ಮಾಡಲಾಗಿತ್ತು. ಕೊಂಕಣಿ ಲೇಖಕರ ಸಂಘದ ಸಂಚಾಲಕ ರಿಚಾರ್ಡ್ ಮೋರಾಸ್ ಕೂಡ ರಸ್ತೆಗೆ ಮರು ನಾಮಕರಣ ಮಾಡುವಂತೆ ಮನವಿ ಮಾಡಿದ್ದರು ಎಂದು ನೆನಪಿಸಿದರು.

ಮಂಗಳೂರಿನ ನಾರಾಯಣ ಗುರು ವೃತ್ತ ನಿರ್ವಹಣೆಯನ್ನು ಮೂಡಾದಿಂದ ಮಾಡಲಾಗುತ್ತಿದೆ. ಈ ವೃತ್ತದ ನಿರ್ವಹಣೆಯನ್ನು ಕುದ್ರೋಳಿ ದೇವಸ್ಥಾನ ಆಡಳಿತ ಮಂಡಳಿ ಕೇಳಿದ್ದು ಈ ಬಗ್ಗೆ ಪರೀಶಿಲನೆ ನಡೆಸ್ತೇವೆ ಎಂದರು.

.

Join Whatsapp
Exit mobile version