ಮಂಗಳೂರು: ಹತ್ರಾಸ್ ನಲ್ಲಿ ವಿದ್ಯಾರ್ಥಿ ನಾಯಕರ ಬಂಧನ ಖಂಡಿಸಿ CFI ಪ್ರತಿಭಟನೆ

Prasthutha|

ಮಂಗಳೂರು: ಹತ್ರಾಸ್ ನಲ್ಲಿ ಅನ್ಯಾಯವಾಗಿ ವಿದ್ಯಾರ್ಥಿ ನಾಯಕರನ್ನು ಬಂಧಿಸಿದ ಯೋಗಿ ಸರಕಾರದ ವಿರುದ್ಧ ಮಂಗಳೂರಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿಗಳು ಬೃಹತ್ ರ್ಯಾ ಲಿ ಹಾಗೂ ಪ್ರತಿಭಟನೆಯನ್ನು ನಡೆಸಿದರು.ಸಿಎಫ್ ಐ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಮಾತನಾಡಿ, ಯುಎಪಿಎ ಯಿಂದ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಹತ್ರಾಸ್ ಸಂತ್ರಸ್ತರಿಗೆ ಸಾಂತ್ವನ ಹೇಳಲು ತೆರಳುತ್ತಿದ್ದ ನಾಲ್ವರು ವಿದ್ಯಾರ್ಥಿ ನಾಯಕರನ್ನು ಅನ್ಯಾಯವಾಗಿ ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ.

- Advertisement -

ಈ ಮೂಲಕ ವಿದ್ಯಾರ್ಥಿ ನಾಯಕರನ್ನು ಬೆದರಿಸಲು ಯುಪಿ ಸರ್ಕಾರ ಪ್ರಯತ್ನಿಸಿದೆ. ಇದಕ್ಕೆ ನಾವು ಹೆದರುವುದಿಲ್ಲ. ದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿ ದಾಳಿ ನಡೆಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೋಮುಧ್ರುವೀಕರಣ ನಡೆಯುತ್ತಿದ್ದು, ಕೋಮುಗಲಭೆಗೆ ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.


ಅಲೋಶಿಯಸ್ ಕಾಲೇಜಿನ ಉದ್ಯಾನವನಕ್ಕೆ ಸ್ಟ್ಯಾನ್ ಸ್ವಾಮಿಯವರ ಹೆಸರು ಇಡಲು ತೀರ್ಮಾನ ಕೈಗೊಂಡಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ ಎಂದರು.ಪ್ರತಿಭಟನೆಯಲ್ಲಿ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಅಶ್ವಾನ್ ಸಾದಿಕ್, ಸಾದಿಕ್ ಕಣ್ಣೂರು ಮುಂತಾದವರು ಭಾಗಿಯಾಗಿದ್ದರು.



Join Whatsapp