Home ಕರಾವಳಿ ಮಂಗಳೂರು: ಹೋಲಿ ಕಾರ್ಯಕ್ರಮಕ್ಕೆ ದಾಳಿ ನಡೆಸಿ ದಾಂಧಲೆ ನಡೆಸಿದ ಬಜರಂಗದಳ ಕಾರ್ಯಕರ್ತರು

ಮಂಗಳೂರು: ಹೋಲಿ ಕಾರ್ಯಕ್ರಮಕ್ಕೆ ದಾಳಿ ನಡೆಸಿ ದಾಂಧಲೆ ನಡೆಸಿದ ಬಜರಂಗದಳ ಕಾರ್ಯಕರ್ತರು

ಮಂಗಳೂರು: ಹೋಲಿ ಕಾರ್ಯಕ್ರಮಕ್ಕೆ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರು ದಾಂಧಲೆಗೈದ ಘಟನೆ ನಗರದ ಮರೋಳಿ ಎಂಬಲ್ಲಿ ನಡೆದಿದೆ.

ಹೋಲಿ ಆಚರಣೆಯ ಅಂಗವಾಗಿ ‘ರಂಗ್ ದ ಬರ್ಸಾ’ ಹೆಸರಿನಲ್ಲಿ ಡಿಜೆ ಪಾರ್ಟಿ ಆಯೋಜಿಸಲಾಗಿತ್ತು. ಈ ವೇಳೆ ಯುವಕ ಯುವತಿಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುತ್ತಿದ್ದ ವೇಳೆ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರು ಅನ್ಯ ಕೋಮಿನ ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪಿಸಿ ದಾಂಧಲೆ ನಡೆಸಿದ್ದು, ಸ್ಥಳದಲ್ಲಿದ್ದ ಹೋಲಿ ಸಂಭ್ರಮದ ಬ್ಯಾನರ್ ಹಾಗೂ ವಸ್ತುಗಳನ್ನು ಪುಡಿಗೈಯ್ಯಲಾಗಿದೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಆರು ಮಂದಿ ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಒಟ್ಟು 6 ಮಂದಿ ಹೋಗಿ ಅಡ್ಡಿಪಡಿಸಿದ್ದರು. ಕೆಲವು ಬ್ಯಾನರ್, ಪೋಸ್ಟರ್‌ಗಳಿಗೆ ಹಾನಿಯಾಗಿದೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಿದ್ದೇವೆ ಎಂದು ಮಂಗಳೂರು ಕಮಿಷನರ್ ಕುಲದೀಪ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

Join Whatsapp
Exit mobile version