Home ಟಾಪ್ ಸುದ್ದಿಗಳು ಮಂಗಳೂರು | ಸೈಟ್ ತೋರಿಸುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ಆರೋಪ: ಉದ್ಯಮಿ ವಿರುದ್ಧ ಪ್ರಕರಣ...

ಮಂಗಳೂರು | ಸೈಟ್ ತೋರಿಸುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ಆರೋಪ: ಉದ್ಯಮಿ ವಿರುದ್ಧ ಪ್ರಕರಣ ದಾಖಲು

Emergency lights flashing on police cars at night at the scene of an accident or crime. Focus shifts from lights in the foreground to the lights in the background.

ಮಂಗಳೂರು: ಉದ್ಯಮಿಯೋರ್ವರು ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಪಾಂಡೆಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 ದಿನಗಳ ಹಿಂದೆ ಸ್ನೇಹಿತರ ಬಳಿ ಯುವತಿಯ ನಂಬರ್ ಪಡೆದುಕೊಂಡಿದ್ದ ಉದ್ಯಮಿ ಯುವತಿಗೆ ಕರೆ ಮಾಡಿ ಕುಶಾಲನಗರದ ಸೈಟ್ ಬಗ್ಗೆ ವಿವರಿಸಿ ಖರೀದಿಸಲು ತಿಳಿಸಿದ್ದ. ಯುವತಿ ಅಲ್ಲಿಯೇ ಸ್ಥಳೀಯ ನಿವಾಸಿ ಆದ ಕಾರಣ ಜಾಗ ಖರೀದಿಸಲು ಒಲವು ತೋರಿದರು.
ಉದ್ಯಮಿ ರಶೀದ್ ಎಂಬಾತ ಜಾಗ ನೋಡಲು ನನ್ನ ಕಾರಿನಲ್ಲೆ ಬಾ ನಾನೇ ನಿನ್ನ ನ್ನು ಕರೆದುಕೊಂಡು ಹೋಗುತ್ತಾನೆ ಎಂದು ಹೇಳಿದಾಗ ಯುವತಿ ಒಪ್ಪಿಕೊಂಡರು. ಹಾಗೇ ರಾತ್ರಿ 8 ಗಂಟೆ ಸುಮಾರಿಗೆ ವಿರಾಜಪೇಟೆ ತಲುಪಿದರು.

ಯುವತಿ ಹೋಟೆಲ್ ನಲ್ಲಿ 2 ರೂಮ್ ಬುಕ್ ಮಾಡಿದ್ದರು. ಇದನ್ನು ಪ್ರಶ್ನಿಸಿದ ರಶೀದ್ ಒಂದೇ ರೂಮ್ ನಲ್ಲಿ ಇರಬಹುದು ಅಲ್ಲಾ 2 ರೂಮ್ ಯಾಕೆ ಬುಕ್ ಮಾಡಿದ್ದು ಎಂದಾಗ ಗಾಬರಿಗೊಂಡ ಯುವತಿ ಅಲ್ಲಿಂದ ತೆರಳಿ ತನ್ನ ತಂಗಿಯ ಮನೆಯಲ್ಲಿ ಉಳಿದುಕೊಂಡಿದ್ದರು.

ಮರುದಿನ ರಶೀದ್ ಕರೆ ಮಾಡಿ 12 ಗಂಟೆ ಗೆ ಸೈಟ್ ನೋಡಲು ಬಾ ಎಂದನು. ನಿನ್ನೆ ಒಂದೆ ರೂಮ್ ನಲ್ಲಿ ಇರಬಹುದು ಇತ್ತು ನಾನು ಏನೋ ನಿರೀಕ್ಷೆ ಮಾಡಿ ಇದ್ದೆ ಎಂದಾಗ ಯುವತಿ ನೀವು ಹೀಗೆ ಮಾತಾನಾಡುವುದು ಸರೀ ಅಲ್ಲ ನೀವು ವಯಸ್ಸಿನಲ್ಲಿ ನನ್ನ ತಂದೆ ಸಮಾನ ಎಂದಾಗ ತಪ್ಪಾಯಿತ್ತು ಸ್ವಾರಿ ಎಂದನು.

ಮತ್ತೆ ಕಾರಿನಲ್ಲಿ ಸೈಟ್ ನೋಡಲು ಕಾರಿನಲ್ಲಿ ಹೋದಾಗ ದಾರಿ ಮಧ್ಯೆ ಕಾರು ನಿಲ್ಲಿಸಿ ಲೈಂಗಿಕ ದೌರ್ಜನ್ಯ ನೀಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

Join Whatsapp
Exit mobile version