ಮಂಗಳೂರು | ಟೇಕಾಫ್‍’ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ: ಕೆಲ ಕಾಲ ಆತಂಕದ ವಾತಾವರಣ

Prasthutha|

ಮಂಗಳೂರು: ಟೇಕಾಫ್‍’ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

- Advertisement -

ಬೆಳಗ್ಗೆ 8:30ಕ್ಕೆ ದುಬೈಗೆ ತೆರಳಲು ಇಂಡಿಗೋ ವಿಮಾನ ಸಿದ್ಧವಾಗಿತ್ತು. ಈ ವೇಳೆ ಟ್ಯಾಕ್ಸಿ ವೇ ದಾಟಿ ರನ್ ವೇನಲ್ಲಿ ಸಾಗುತ್ತಿದ್ದಾಗ ವಿಮಾನದ ರೆಕ್ಕೆಗೆ ಹಕ್ಕಿಯೊಂದು ಬಡಿದಿದೆ.

ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ಹಕ್ಕಿಯ ಡಿಕ್ಕಿಯಿಂದಾಗಿ ಉಂಟಾಗಿರಬಹುದಾದ ಹಾನಿಯ ತಪಾಸಣೆ ಮಾಡಲಾಗುತ್ತಿದೆ. ಅಲ್ಲದೆ ಪ್ರಯಾಣಿಕರನ್ನು ಕರೆದೊಯ್ಯಲು ಬೆಂಗಳೂರಿನಿಂದ ಮತ್ತೊಂದು ವಿಮಾನವನ್ನು ತರಿಸಲಾಯಿತು. ಘಟನೆಯಿಂದ ಕೆಲ ಕಾಲ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

- Advertisement -