Home ಟಾಪ್ ಸುದ್ದಿಗಳು ಪ್ರೀತಿಸಲು ನಿರಾಕರಿಸಿದ ಸಹದ್ಯೋಗಿ ಮೇಲೆ ಮ್ಯಾನೇಜರ್ ಹಲ್ಲೆ

ಪ್ರೀತಿಸಲು ನಿರಾಕರಿಸಿದ ಸಹದ್ಯೋಗಿ ಮೇಲೆ ಮ್ಯಾನೇಜರ್ ಹಲ್ಲೆ

ಬೆಂಗಳೂರು,ಆ.4: ಪ್ರೀತಿಸಲು ನಿರಾಕರಿಸಿದ ಸಹದ್ಯೋಗಿ ಮೇಲೆ ಮ್ಯಾನೇಜರ್ ಹಲ್ಲೆ ಮಾಡಿರುವ ಘಟನೆ ಬಸವನಗುಡಿಯ ರಾಮಕೃಷ್ಣ ಆಶ್ರಮ ರಸ್ತೆಯಲ್ಲಿರುವ ಪಿಜ್ಜಾ ಹಟ್ ನಲ್ಲಿ ನಡೆದಿದೆ.

ಪಿಜ್ಜಾ ಹಟ್ ಮ್ಯಾನೇಜರ್ ಸಂತ್ರಸ್ತೆಯನ್ನು ಪ್ರೀತಿ ಮಾಡುವಂತೆ ಪೀಡಿಸಿದ್ದು, ಯುವತಿ ನಿರಾಕರಿಸಿದಾಗ ಕೋಪಗೊಂಡ ಮ್ಯಾನೇಜರ್ ಆಕೆಯ ಮೊಬೈಲ್ ಚೆಕ್ ಮಾಡಿ ಮನಬಂದಂತೆ ಕಪಾಳಕ್ಕೆ ಭಾರಿಸಿದ್ದಾನೆ.

ಹೊಡೆದ ರಭಸಕ್ಕೆ ಯುವತಿ ನೆಲಕ್ಕೆ ಉರುಳಿಬಿದ್ದಿದ್ದು, ಸ್ಥಳದಲ್ಲಿದ್ದ ಮತ್ತೋರ್ವ ಸಿಬ್ಬಂದಿ ಆಕೆಯ ಸಹಾಯಕ್ಕೆ ಮುಂದಾಗಿದ್ದಾನೆ.

ಕೆಲಸ ಹೋಗುವ ಭಯದಲ್ಲಿ ಯುವತಿ ಯಾವುದೇ ದೂರು ದಾಖಲಿಸಿಲ್ಲ. ಆದರೆ ಮ್ಯಾನೇಜರ್ ಯವತಿ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

Join Whatsapp
Exit mobile version