Home ಟಾಪ್ ಸುದ್ದಿಗಳು ಉಡುಪಿ: ದ್ವಿಚಕ್ರ ವಾಹನಕ್ಕೆ ನಾಯಿಯ ಮೃತದೇಹ ಕಟ್ಟಿ ಎಳೆದೊಯ್ದ ವ್ಯಕ್ತಿ

ಉಡುಪಿ: ದ್ವಿಚಕ್ರ ವಾಹನಕ್ಕೆ ನಾಯಿಯ ಮೃತದೇಹ ಕಟ್ಟಿ ಎಳೆದೊಯ್ದ ವ್ಯಕ್ತಿ

ಉಡುಪಿ: ನಾಯಿಯ ಮೃತದೇಹವನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿ ವ್ಯಕ್ತಿಯೋರ್ವ ಎಳೆದೊಯ್ದಿರುವ ಘಟನೆ ಶಿರ್ವ ಪೇಟೆಯಲ್ಲಿ ನಡೆದಿದೆ.


ಕಾಪು ತಾಲೂಕಿನ ಶಿರ್ವದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೋರ್ವ ಸ್ಕೂಟರ್ ಗೆ ಕಟ್ಟಿ ಮೃತಪಟ್ಟಿದ್ದ ನಾಯಿಯನ್ನು ಎಳೆದೊಯ್ದಿದ್ದಾನೆ.


ಕೊಂಬಗುಡ್ಡೆಯಿಂದ ಶಿರ್ವ ಪೇಟೆಯವರೆಗೆ ನಾಯಿಯನ್ನು ಸುಮಾರು ಐದು ಕಿಲೋ ಮೀಟರ್ ದೂರ ಎಳೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಶಿರ್ವ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version