Home ಟಾಪ್ ಸುದ್ದಿಗಳು ಕೇರಳ: ಸಿಪಿಐ(ಎಂ) ಪ್ರಧಾನ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆದು ವ್ಯಕ್ತಿ ಪರಾರಿ

ಕೇರಳ: ಸಿಪಿಐ(ಎಂ) ಪ್ರಧಾನ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆದು ವ್ಯಕ್ತಿ ಪರಾರಿ

ತಿರುವನಂತಪುರಂ: ಸಿಪಿಐ(ಎಂ) ರಾಜ್ಯ ಪ್ರಧಾನ ಕಚೇರಿ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಸ್ಫೋಟಕ ವಸ್ತು ಎಸೆದು ಪರಾರಿಯಾದ ಘಟನೆ ತಿರುವನಂತಪುರಂನಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾತ್ರಿ 11.30ರ ಸುಮಾರಿಗೆ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ರಾಜಧಾನಿಯ ಹೃದಯಭಾಗದಲ್ಲಿರುವ ಎಕೆಜಿ ಸೆಂಟರ್ ಗೆ ಸ್ಫೋಟಕ ವಸ್ತು ಎಸೆದಿದ್ದಾನೆ. ಕೇಂದ್ರ ಕಚೇರಿಯಲ್ಲಿ ತಂಗಿದ್ದ ಪಕ್ಷದ ಕೆಲವು ಮುಖಂಡರು, ಕಟ್ಟಡದ ಹೊರಗೆ ಸ್ಫೋಟದ ಶಬ್ದ ಕೇಳಿ ಹೊರಬಂದಿದ್ದಾರೆ. ಬಳಿಕ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಿಪಿಐ(ಎಂ) ಮುಖಂಡರು ಇದೊಂದು ಬಾಂಬ್ ದಾಳಿ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಕೇರಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Join Whatsapp
Exit mobile version