Home ಟಾಪ್ ಸುದ್ದಿಗಳು ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಪತಿ

ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಪತಿ

ಚಾಮರಾಜನಗರ: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಪತಿ, ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಘಟನೆ ಮೂಡ್ನಾಕೂಡು ಗ್ರಾಮದಲ್ಲಿ ನಡೆದಿದೆ.


ಮೂಡ್ನಾಕೂಡು ಗ್ರಾಮದ ಎಂ.ಸಿ.ಸೌಮ್ಯ (27) ಕೊಲೆಯಾದವರು. ಪತಿ ಮಹೇಶ್ ಚಂದ್ರಗುರು ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನ್ನು ತಿಳಿದ ಸೌಮ್ಯ ಆತನನ್ನು ಪ್ರಶ್ನಿಸಿ ಜಗಳ ತೆಗೆದಿದ್ದು, ಇದರಿಂದ ಕೋಪಗೊಂಡ ಪತಿ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿ ಮಹೇಶ್ ಚಂದ್ರಗುರುನನ್ನು ಬಂಧಿಸಿದ್ದಾರೆ.


ಇನ್ನು ಪತಿ ಮಹೇಶ್ ಚಂದ್ರಗುರು ಮತ್ತು ಸೌಮ್ಯ ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಐದು ವರ್ಷದ ಹೆಣ್ಣು ಮಗುವಿದೆ. ಪತ್ನಿ ಸೌಮ್ಯ ಪತಿಯಿಂದಲೇ ಕೊಲೆಯಾಗಿದ್ದರೆ ಕೃತ್ಯ ನಡೆಸಿದ ತಂದೆ ಜೈಲು ಪಾಲಾಗುವುದರಿಂದ ಹೆಣ್ಣು ಮಗು ಕೂಡ ತಬ್ಬಲಿಯಾಗಿದೆ.

Join Whatsapp
Exit mobile version