ಲಖ್ನೋ: ಬುರ್ಖಾ ಧರಿಸಿ ಹೋಗುತ್ತಿದ್ದ ಮಹಿಳೆ ಬೆನ್ನಿಗೆ ದುಷ್ಕರ್ಮಿಯೊಬ್ಬ ಸಮಾಜವಾದಿ ಪಕ್ಷದ ಪೋಸ್ಟರ್ ಅಂಟಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸಮಾಜವಾದಿ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಕೆಂಪು ಟೋಪಿ ಧರಿಸಿರುವ ಕಾರ್ಯಕರ್ತನೋರ್ವ ಬುರ್ಖಾ ಧರಿಸಿರುವ ಮಹಿಳೆಯ ಬೆನ್ನಿಗೆ ಪಕ್ಷದ ಪೋಸ್ಟರ್ ಅಂಟಿಸಿದ್ದಾನೆ.