Home ಟಾಪ್ ಸುದ್ದಿಗಳು ಹರ್ಯಾಣ | ಟ್ರ್ಯಾಕ್‌ನಲ್ಲಿ ಓಡುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ರೈಲು; ವೀಡಿಯೋ ವೈರಲ್

ಹರ್ಯಾಣ | ಟ್ರ್ಯಾಕ್‌ನಲ್ಲಿ ಓಡುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ರೈಲು; ವೀಡಿಯೋ ವೈರಲ್

ಚಂಡೀಗಢ: ಹರ್ಯಾಣದಲ್ಲಿ ಓಡುತ್ತಾ ಹಳಿಯನ್ನು ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಅಪಘಾತದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ರೈಲು ಡಿಕ್ಕಿ ಹೊಡೆದ ಬಳಿಕ ವ್ಯಕ್ತಿ ಹಾರಿ ಹೋಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಮೃತಪಟ್ಟವರನ್ನು ಮಹೇಂದ್ರಗಢ ಜಿಲ್ಲೆಯ ಬವಾನ ಗ್ರಾಮದ ಗಡಿ ಭದ್ರತಾ ಪಡೆ (ಬಿ.ಎಸ್.ಎಫ್.) ಯೋಧ ವೀರ್ ಸಿಂಗ್ ಎಂದು ಗುರುತಿಸಲಾಗಿದೆ.

ಹರ್ಯಾಣದ ಮಜ್ರಾ ಖುರ್ದ್ ಗ್ರಾಮದಲ್ಲಿರುವ ತನ್ನ ಸಹೋದರಿಯನ್ನು ಭೇಟಿ ಮಾಡಲು ತೆರಳುತ್ತಿದ್ದ ವೇಳೆ ಸಮೀಪದ ರೈಲ್ವೇ ಕ್ರಾಸಿಂಗ್’ನಲ್ಲಿ ಈ ಘಟನೆ ನಡೆದಿದೆ. ಹಳಿ ದಾಟಲು ಯತ್ನಿಸಿದಾಗ ಎದುರುನಿಂದ ಬರುತ್ತಿದ್ದ ಡ್ಯುರಾಂಟೊ ಎಕ್ಸ್’ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ.

ಸದ್ಯ ರೈಲ್ವೇ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮಹೇಂದ್ರಗಢ ಆಸ್ಪತ್ರೆಗೆ ರವಾನಿಸಿದ್ದಾರೆ.

Join Whatsapp
Exit mobile version