ಚೆನ್ನೈ ಮಹಿಳಾ ಪೊಲೀಸ್ ಅಧಿಕಾರಿ ರಕ್ಷಿಸಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

Prasthutha|

ಚೆನ್ನೈ: ವಿಪರೀತ ಮಳೆಗೆ ವ್ಯಕ್ತಿಯೋರ್ವ ಪ್ರಜ್ಞಾಹೀನವಾಗಿ ಬಿದ್ದಿದ್ದನ್ನು ಕಂಡಿದ್ದ ಮಹಿಳಾ ಇನ್ ಸ್ಪೆಕ್ಟರ್ ಹೆಗಲ ಮೇಲೆ ಹೊತ್ತು ರಕ್ಷಿಸಿದ ಒಂದು ದಿನದ ನಂತರ ವ್ಯಕ್ತಿ ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

- Advertisement -

ಉದಯ ಕುಮಾರ್ (25) ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿ

ರಸ್ತೆಯಲ್ಲಿ ಬಿದ್ದ ಮರಗಳನ್ನು ತೆರವು ಮಾಡುತ್ತಿದ್ದ ವೇಳೆ ಇನ್ಸ್ ಪೆಕ್ಟರ್ ರಾಜೇಶ್ವರಿ ಅವರಿಗೆ ವ್ಯಕ್ತಿಯೊಬ್ಬರು ಸ್ಮಶಾನದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ ಕರೆ ಬಂದಿದೆ. ಆ ವ್ಯಕ್ತಿಯನ್ನು ಉಳಿಸಬಹುದೆಂಬ ನಂಬಿಕೆಯಿಂದ ರಾಜೇಶ್ವೇರಿ ಅಲ್ಲಿಗೆ ಧಾವಿಸಿದ್ದರು. ಆ ವ್ಯಕ್ತಿ ಪ್ರಜ್ಞಾಹೀನರಾಗಿ ಬಿದ್ದಿದ್ದನ್ನು ಕಂಡ ರಾಜೇಶ್ವರಿ ಅವರು ಹಿಂದೆ ಮುಂದೆ ನೋಡದೆ ನೇರವಾಗಿ ಆ ವ್ಯಕ್ತಿಯನ್ನು ಹೆಗಲೆ ಮೇಲೆ ಎತ್ತಿಕೊಂಡು ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಮಾಡಿದ್ದರು. ಮಹಿಳಾ ಇನ್ ಸ್ಪೆಕ್ಟರ್ ಅವರ ಈ ಕಾರ್ಯ ವ್ಯಾಪಕ ಪ್ರಶಂಸೆಗೆ ಕಾರಣವಾಗಿತ್ತು.. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ಅಭಿನಂದಿಸಿದ್ದಾರೆ.

- Advertisement -

ಆದರೆ ರಕ್ಷಿಸಲ್ಪಟ್ಟ ವ್ಯಕ್ತಿ ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Join Whatsapp