Home ಟಾಪ್ ಸುದ್ದಿಗಳು ಹಲ್ಲುಜ್ಜುವ ಮುನ್ನ ಕಿಸ್​ ಮಾಡಬೇಡ ಎಂದಿದ್ದಕ್ಕೆ ಪತ್ನಿಯನ್ನು ಕೊಲೆ ಮಾಡಿದ ಪತಿ!

ಹಲ್ಲುಜ್ಜುವ ಮುನ್ನ ಕಿಸ್​ ಮಾಡಬೇಡ ಎಂದಿದ್ದಕ್ಕೆ ಪತ್ನಿಯನ್ನು ಕೊಲೆ ಮಾಡಿದ ಪತಿ!

ಪಾಲಕ್ಕಾಡ್: ಹಲ್ಲುಜ್ಜುವ ಮೊದಲು ತಮ್ಮ ಮಗುವಿಗೆ ಮುತ್ತು ಕೊಡಬೇಡ ಎಂದಿದ್ದಕ್ಕೆ ಪತ್ನಿಯನ್ನು ಪತಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಕೇರಳದ ಪಾಲಕ್ಕಾಡ್​​ನಲ್ಲಿ ನಡೆದಿದೆ.

ದೀಪಿಕಾ (28) ಕೊಲೆಯಾದ ಗೃಹಿಣಿ. ಪತಿ ಅವಿನಾಶ್ (30) ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಪಾಲಕ್ಕಾಡ್‌ ನಿವಾಸಿಯಾಗಿದ್ದ ಇವರು 2019 ರಲ್ಲಿ ವಿವಾಹವಾಗಿದ್ದರು. ಅವಿನಾಶ್ ಮತ್ತು ದೀಪಿಕಾಗೆ ಒಂದೂವರೆ ವರ್ಷದ ಮಗನಿದ್ದು, ಬೆಳಗ್ಗೆ ಎದ್ದಾಗ ಅವಿನಾ​ಶ್​ ತಮ್ಮ ಮಗನಿಗೆ ಪ್ರೀತಿಯ ಮುತ್ತು ನೀಡುತ್ತಿದ್ದರು. ಇದನ್ನು ಪತ್ನಿ ದೀಪಿಕಾ ವಿರೋಧಿಸುತ್ತಿದ್ದರು. ಹಲ್ಲುಜ್ಜದೇ ಮಗನಿಗೆ ಕಿಸ್​ ಮಾಡಬೇಡ ಎಂದು ತಗಾದೆ ತೆಗೆಯುತ್ತಿದ್ದರು. ಇದರಿಂದ ರೋಸಿ ಹೋಗಿದ್ದ ಅವಿನಾಶ್​ ದೀಪಿಕಾ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ.

Join Whatsapp
Exit mobile version