Home ಟಾಪ್ ಸುದ್ದಿಗಳು ಕಡಬ: ಚಿನ್ನದ ಅಂಗಡಿ ತೆರೆಯುವ ಸಿದ್ದತೆಯಲ್ಲಿದ್ದ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಡಬ: ಚಿನ್ನದ ಅಂಗಡಿ ತೆರೆಯುವ ಸಿದ್ದತೆಯಲ್ಲಿದ್ದ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಡಬ; ಚಿನ್ನದ ಅಂಗಡಿ ತೆರೆಯುವ ಸಿದ್ದತೆಯಲ್ಲಿದ್ದ ಯುವಕನೋರ್ವ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಗುಂಡ್ಯ ಸಮೀಪ ನಡೆದಿದೆ.


ಮೃತ ಯುವಕನನ್ನು ಕಡಬ ನಿವಾಸಿ ನಾಗಪ್ರಸಾದ್ ಎಂದು ಗುರುತಿಸಲಾಗಿದೆ.


ಮರ್ಧಾಳದ ಮಸೀದಿ ಬಿಲ್ಡಿಂಗ್ ನಲ್ಲಿ ಇಂದು (ಜೂನ್ 22) ಐಶ್ವರ್ಯ ಗೋಲ್ಡ್ ಹೆಸರಿನ ಚಿನ್ನದಂಗಡಿ ಶುಭಾರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ತಯಾರಿ ನಡೆಸಿಕೊಂಡಿದ್ದರು. ಇಂದು ಬೆಳಿಗ್ಗೆ ಸಕಲೇಶಪುರ ಠಾಣಾ ವ್ಯಾಪ್ತಿಯ ಗುಂಡ್ಯ ಸಮೀಪ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಘಟನೆಯ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದು, ತನಿಖೆಯ ನಂತರವಷ್ಟೇ ನಿಖರ ಕಾರಣ ತಿಳಿದುಬರಬೇಕಿದೆ.

Join Whatsapp
Exit mobile version