Home ಟಾಪ್ ಸುದ್ದಿಗಳು ಬಂಡೆ ಮೇಲೆ ಧ್ಯಾನಕ್ಕೆ ಕುಳಿತ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು!

ಬಂಡೆ ಮೇಲೆ ಧ್ಯಾನಕ್ಕೆ ಕುಳಿತ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು!

ಉತ್ತರ ಕನ್ನಡ : ಸಮುದ್ರದ ದಡದ ಬಂಡೆ ಮೇಲೆ ಧ್ಯಾನದಲ್ಲಿ ಕುಳಿತು ಫೋಟೋಗೆ ಪೋಸ್ ಕೊಡುತ್ತಿದ್ದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕುಮಟಾದ ವನ್ನಳ್ಳಿ ಕಡಲತೀರದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಶಿರಸಿ ನಗರದ ನಿವಾಸಿ 42 ವರ್ಷದ ಸುಬ್ಬುಗೌಡ. ಸ್ನೇಹಿತರ ಜೊತೆಗೆ ಬಂದಿದ್ದ ಸುಬ್ಬುಗೌಡ, ಕಡಲತೀರದ ಬಂಡೆ ಮೇಲೆ ಕುಳಿತು ಫೋಟೋಗೆ ಪೋಸ್ ಕೊಡುತ್ತಿದ್ದ ವೇಳೆ ಅಪ್ಪಳಿಸಿದ ಬೃಹತ್ ಗಾತ್ರದ ಅಲೆಯಿಂದ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version