Home ಟಾಪ್ ಸುದ್ದಿಗಳು ಸ್ನೇಹಿತರ ಕಣ್ಣೆದುರಲ್ಲೇ ನದಿಯಲ್ಲಿ ಕೊಚ್ಚಿಹೋದ ಯುವಕ

ಸ್ನೇಹಿತರ ಕಣ್ಣೆದುರಲ್ಲೇ ನದಿಯಲ್ಲಿ ಕೊಚ್ಚಿಹೋದ ಯುವಕ

ಮಹಾರಾಷ್ಟ್ರ: ಭಾರಿ ಮಳೆಯಿಂದ ನದಿ-ಹಳ್ಳಗಳು ತುಂಬಿ ತುಳುಕುತ್ತಿದೆ. ಮೋಜು ಮಾಡಲು ನೀರಿಗಿಳಿಯದಂತೆ ಎಚ್ಚರಿಕೆಗಳನ್ನು ನೀಡಲಾಗುತ್ತಿದೆ. ಆದರೆ ಕೆಲವರಿಗೆ ಈ ಎಚ್ಚರಿಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಹಾರಾಷ್ಟ್ರದ ರತ್ನಗಿರಿ ನದಿಯಲ್ಲಿ ತುಂಬಿದ ನದಿಯಲ್ಲಿ ಈಜಲು ಹೋದ ವ್ಯಕ್ತಿಯೋರ್ವ ಸ್ನೇಹಿತರು ನೋಡುತ್ತಿದ್ದಂತೆಯೇ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋದ ಘಟನೆ ನಡೆದಿದೆ.

ಸ್ನೇಹಿತರು ಆತನನ್ನು ರಕ್ಷಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ಹರಿಯುತ್ತಿರುವ ನದಿಯಲ್ಲಿ ಈಜಿ ಸಾಹಸ ಮಾಡಲು ಹೋದ ವ್ಯಕ್ತಿ ಸ್ನೇಹಿತರ ಎದುರೇ ನದಿಯಲ್ಲಿ ಕೊಚ್ಚಿ ಹೋದ ವೀಡಿಯೊ ವೈರಲ್ ಆಗಿದೆ.

Join Whatsapp
Exit mobile version