Home ಟಾಪ್ ಸುದ್ದಿಗಳು ಶ್ವಾಸನಾಳದಲ್ಲಿ ಹಲ್ವಾ ಸಿಲುಕಿ ವ್ಯಕ್ತಿ ಮೃತ್ಯು

ಶ್ವಾಸನಾಳದಲ್ಲಿ ಹಲ್ವಾ ಸಿಲುಕಿ ವ್ಯಕ್ತಿ ಮೃತ್ಯು

ಚೆರುಪುಲ್ಲಿ (ಕೇರಳ): ಶ್ವಾಸನಾಳದಲ್ಲಿ ಹಲ್ವಾ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಕೇರಳದ ಚೆರುಪುಲ್ಲಿ ಎಂಬಲ್ಲಿ ನಡೆದಿದೆ.


ಕೇರಳದ ಥಾಮರಾ ಮುಕ್ಕುವಿನ ಚೆರುಪುಲ್ಲಿ ಪರಂಬುವಿನ ನಿವಾಸಿ 49 ವರ್ಷದ ನಿಜಾರ್ ಮೃತಪಟ್ಟವರು.


ನಿಜಾರ್ ಗೆ ಕೇರಳ ಹಲ್ವಾ ತುಂಬಾ ಇಷ್ಟ. ಆದರೆ ಅವರು ಈ ಹಲ್ವಾವನ್ನು ಗಡಿಬಿಡಿಯಿಂದ ತಿಂದುಬಿಟ್ಟಿದ್ದಾರೆ. ಅಂಟುಅಂಟಾಗಿರುವ ಈ ಹಲ್ವಾ ಅವರ ಶ್ವಾಸನಾಳದಲ್ಲಿ ಸಿಲುಕಿಬಿಟ್ಟಿದೆ.ಇದರಿಂದ ಅವರಿಗೆ ಉಸಿರಾಡಲು ಸಾಧ್ಯವಾಗಲಿಲ್ಲ. ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನ ಆಗಲಿಲ್ಲ. ಶ್ವಾಸನಾಳದಲ್ಲಿ ಹಲ್ವಾ ಸಿಲುಕಿ, ಅಲ್ಲಿಯೇ ಅಂಟುಕೊಂಡು ಮುಂದಕ್ಕೆ ಹೋಗದ ಹಿನ್ನೆಲೆಯಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ.

Join Whatsapp
Exit mobile version