Home ಟಾಪ್ ಸುದ್ದಿಗಳು ಪೆಟ್ರೋಲ್‌ ಬೆಲೆ ದುಬಾರಿಯೆಂದು ಕುದುರೆ ಖರೀದಿಸಿದ ವ್ಯಕ್ತಿ

ಪೆಟ್ರೋಲ್‌ ಬೆಲೆ ದುಬಾರಿಯೆಂದು ಕುದುರೆ ಖರೀದಿಸಿದ ವ್ಯಕ್ತಿ

ಮುಂಬೈ: ಪೆಟ್ರೋಲ್‌ ಬೆಲೆ ದುಬಾರಿಯಾಗಿದೆಯೆಂದು ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ದಿನನಿತ್ಯದ ಸಂಚಾರಕ್ಕೆ  ಕುದುರೆಯನ್ನೇ ಖರೀದಿಸಿದ್ದಾರೆ.

ಔರಂಗಾಬಾದ್‌ನ ಕಾಲೇಜೊಂದರಲ್ಲಿ ಪ್ರಯೋಗಾಲಯದ ಸಹಾಯಕರಾಗಿರುವ ಶೇಖ್‌ ಯೂಸುಫ್ ಅವರ ಬೈಕು ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಹಾಳಾಗಿತ್ತು. ರಿಪೇರಿ ಮಾಡಿಸಿಕೊಳ್ಳಲು ಗ್ಯಾರೇಜ್‌ಗಳೂ ತೆರೆದಿರಲಿಲ್ಲ.

ಆದ್ದರಿಂದ 40,000 ರೂ. ಕೊಟ್ಟು ಕುದುರೆಯೊಂದನ್ನು ಖರೀದಿಸಿ ಅದರಲ್ಲೇ ಸಂಚರಿಸಲು ಆರಂಭಿಸಿದ್ದಾರೆ. ಇತ್ತೀಚೆಗೆ ಪೆಟ್ರೋಲ್‌ ಬೆಲೆ ಏರಿಕೆಯಾದ ಮೇಲೆ ಅವರಿಗೆ ಕುದುರೆಯೇ ವರವಾಗಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಯೂಸುಫ್ ಗಾಡಿಗೆ ಪೆಟ್ರೋಲ್‌ ಹಾಕಿಸುವ ಬದಲು ಅರಾಮಾಗಿ ಕುದುರೆ ಏರಿ ಓಡಾಡುತ್ತೇನೆ ಎನ್ನುತ್ತಾರೆ.

ಆದರೆ ಈ ರೀತಿ ಮೂಕಪ್ರಾಣಿಗಳನ್ನು ಬಳಸಿಕೊಳ್ಳುತ್ತಿರುವುದು ತಪ್ಪು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

Join Whatsapp
Exit mobile version