ಸಾರ್ವಜನಿಕವಾಗಿ ಮೂತ್ರ ಮಾಡಿದ ಯುವಕನ ಥಳಿಸಿ ಕೊಂದ ದುಷ್ಕರ್ಮಿಗಳು
Prasthutha: November 17, 2020

ಬಹ್ರೇಚ್ : ಉತ್ತರ ಪ್ರದೇಶದ ಬಹ್ರೇಚ್ ನಲ್ಲಿ ಸಾರ್ವಜನಿಕವಾಗಿ ಮೂತ್ರ ಮಾಡಿದ 23 ವರ್ಷದ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳ ಗುಂಪೊಂದು ಥಳಿಸಿ ಕೊಂದ ಘಟನೆ ನಡೆದಿದೆ.
ಖೈರಿ ದಿಕೊಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ.
ಸುಹೇಲ್ ತನ್ನ ಸೋದರ ಸಂಬಂಧಿಯ ಮನೆ ಮುಂದೆ ಮೂತ್ರ ಮಾಡುತ್ತಿದ್ದ. ಆತನ ನೆರೆ ಮನೆಯ ರಾಮ್ ಮೂರತ್, ಆತ್ಮರಾಮ್, ರಾಮ್ ಪಾಲ್, ಸನೇಹಿ, ಮನ್ ಜೀತ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಥಳಿಸಿದ್ದಾರೆ.
ಗಂಭಿರ ಗಾಯಗೊಂಡಿದ್ದ ಸುಹೇಲ್ ನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
